
ಕಲ್ಯಾ, ಆ. 15: ಚೈತನ್ಯ ಮಿತ್ರಮಂಡಳಿ (ರಿ. ) ಕಲ್ಯಾ, ಚೈತನ್ಯ ಮಹಿಳಾ ಮತ್ತು ಯುವತಿ ಮಂಡಲ ಕಲ್ಯಾ ಇವುಗಳ ಆಶ್ರಯದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಘದ ಆವರಣದಲ್ಲಿ ಆಚರಿಸಲಾಯಿತು. ಚೈತನ್ಯ ಮಿತ್ರ ಮಂಡಳಿ ಅಧ್ಯಕ್ಷ ಅನೂಪ್ ಕುಮಾರ್ ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಸತೀಶ್ ಕೋಟ್ಯಾನ್ ಯತೀಶ್, ಪ್ರವೀಣ್, ಸುಜಿತ್, ದೀರಜ್ ಶೆಟ್ಟಿ, ಯತೀಶ್ ಅಮೀನ್, ರವಿರಾಜ್ ಆಚಾರ್ಯ, ಬೂಬ ಪೂಜಾರಿ ರೂಪಾ ಯತೀಶ್ ಉಪಸ್ಥಿತರಿದ್ದರು.