
ಕಾರ್ಕಳ : ಡಿ.ಜೆ. ಹಳ್ಳಿಯ ಘಟನೆಯಲ್ಲಿ ಪೊಲೀಸ್ ಇಲಾಖೆ ಕೈಗೊಂಡ ಕ್ರಮವನ್ನು ಸ್ವಾಗತಿಸುತ್ತೇನೆ. ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು. ಗಲಭೆಯಿಂದ ಆದ ಸಾರ್ವಜನಿಕ ನಷ್ಟವನ್ನು ಗಲಭೆಕೋರರಿಂದಲೇ ಜಫ್ತಿ ಮಾಡುವಂತೆ ಸರಕಾರವನ್ನು ಒತ್ತಾಯಿಸುತ್ತೇನೆಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಆ. 12ರಂದು ಟ್ವಿಟ್ಟರ್ ಹೇಳಿಕೆಯಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.