
ಬೆಂಗಳೂರು, ಆ. 10: ಶಿರಸಿಯ ಸರ್ಕಾರಿ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸನ್ನಿಧಿ ಮಹಾಬಲೇಶ್ವರ ಹೆಗಡೆ, ಮಂಡ್ಯ ತಾಲೂಕಿನ ಮಾರದೇವನಹಳ್ಳಿ ಶ್ರೀ ಸತ್ಯಸಾಯಿ ಸರಸ್ವತಿ ಹೈಸ್ಕೂಲ್‌ನ ಎಂ.ಪಿ.ಧೀರಜ್ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ಅನುಷ್ ಎ.ಎಲ್., ಬೆಂಗಳೂರಿನ ನಾಗಸಂದ್ರದ ಸೈಂಟ್ ಮೇರಿಸ್ ಶಾಲೆಯ ಚಿರಾಯು ಕೆ.ಎಸ್., ಬೆಂಗಳೂರಿನ ಸದಾಶಿವ ನಗರದ ಪೂರ್ಣ ಪ್ರಜ್ಞಾ ಎಜುಕೇಶನ್ ಸೆಂಟರ್ನ ನಿಖೇಶ್ ಎಂ. ಮರಳಿ, ಚಿಕ್ಕಮಗಳೂರಿನ ಸೇಂಟ್ ಜೋಸೆಫ್ ಕಾನ್ವೆಂಟ್ ಗರ್ಲ್ಸ್ ಹೈಸ್ಕೂಲ್‌ನ ಐ.ಪಿ. ತನ್ಮಯಿ ಸೇರಿ ಆರು ಮಂದಿ ಎಸ್ಎಸ್ಎಲ್ಸಿ ಫಲಿತಾಂಶದ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. 11 ವಿದ್ಯಾರ್ಥಿಗಳು ಎರಡನೇ ಸ್ಥಾನವನ್ನು ಅಂಚಿಕೊಂಡಿದ್ದಾರೆ.