
ಕಾರ್ಕಳ: ಈ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳದ ಕ್ರೈಸ್ಟ್‍ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆ 98.76 ಶೇಕಡಾ ಫಲಿತಾಂಶ ದಾಖಲಿಸಿದೆ. ಸಂಸ್ಥೆಯಿಂದ ಒಟ್ಟು 81 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 34 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಉಳಿದಂತೆ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಲ್ಯಾನ್ ಮೆರಿಲ್ ಜೊನನ್ ಕರ್ಕಡ 613 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಹಾಗೂ ಐಶ್ವರ್ಯ 611 ಅಂಕಗಳೊಂದಿಗೆ ದ್ವಿತೀಯ ಸ್ಥಾನಿ ಗಳಿಸಿದ್ದಾರೆ. ಉಳಿದಂತೆ ದಿವ್ಯ ಸುಹಾಸಿನಿ ಸೋನ್ಸ್ 607, ಪುಣ್ಯ 604, ಮೆಲಿಟಾ ವೆಲ್ಸಿಯಾ ಟೆಲ್ಲಿಸ್ 602, ರೀವನ್ ಡಿ’ಕುನ್ಹಾ 601 ಅಂಕ ಪಡೆದುಕೊಂಡಿದ್ದಾರೆ.