ಮುಂಬಯಿ, ಆ. 10: ನವಿ ಮುಂಬಯಿಯ ನವಶೇವಾ ಬಂದರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಸ್ಟಮ್ಸ್ ಇಲಾಖೆಯವರು ಸುಮಾರು 1,000ಕೋ.ರೂ. ಮೌಲ್ಯದ 191 ಕೆ.ಜಿ.ಹೆರಾಯ್ನ್ ವಶಪಡಿಸಿಕೊಂಡಿದ್ದಾರೆ. ದೇಶದಲ್ಲಿ ವಶಪಡಿಸಿಕೊಳ್ಳಲಾದ ಅತಿ ಹೆಚ್ಚು ಮೊತ್ತದ ಮಾದಕ ವಸ್ತು ಪ್ರಕರಣಗಳಲ್ಲಿ ಇದು ಒಂದು ಕಸ್ಟಂಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಫ್ಘಾನಿಸ್ಥಾನದಿಂದ ಆಯುರ್ವೇದ ಔಷಧಿ ಎಂದು ನಮೂದಿಸಿ ಇದನ್ನು ತರಲಾಗಿದೆ. ಈ ಪಾರ್ಸೆಲ್ ಅನ್ನು ಕ್ಲಿಯರಿಂಗ್ ಮಾಡಿದ ಇಬ್ಬರು ಕ್ಲಿಯರಿಂಗ್ ಏಜೆಂಟ್ ಗಳನ್ನು ಬಂಧಿಸಲಾಗಿದೆ.
191 ಕೆ.ಜಿ.ಮಾದಕ ವಸ್ತುವನ್ನು ಬಿದಿರಿನ ಬಣ್ಣ ಬಳಿದ ಪೈಪಿನ ಒಳಗೆ ತುಂಬಿಸಿ ತರಲಾಗಿತ್ತು.