2 ವಿಕೆಟ್ ನಷ್ಟಕ್ಕೆ 406 ರನ್, ನಾಯಕ ಶುಭ್‌ಮನ್ ಗಿಲ್ ದ್ವಿಶತಕದ ದಾಖಲೆ, ಶತಕ ಬಾರಿಸಿದ ರೋಹಿತ್
ನವದೆಹಲಿ: ಗುವಾಹಟಿಯಲ್ಲಿ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ದ 2 ವಿಕೆಟ್ ಗೆ 406 ರನ್ ಬಾರಿಸುವ ಮೂಲಕ ಜಯ ಗಳಿಸಿದೆ.
ಕ್ಯಾಪ್ಟನ್ ಶುಭ್‌ಮನ್ ಗಿಲ್ ಅವರ ದ್ವಿಶತಕ ಮತ್ತು ರೋಹಿತ್ ಶರ್ಮಾ ಅಬ್ಬರದ ಶತಕದಾಟದಿಂದ ವೆಸ್ಟ್ ಇಂಡೀಸ್ ಆಟಗಾರರನ್ನು ಭಾರತ ಮಣಿಸಿದೆ. 43.3 ಓವರ್‌ಗಳಲ್ಲಿ 8 ವಿಕೆಟ್‌ಗಳ ಅಂತರದಿಂದ ಭಾರತ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದೆ. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಯಶಸ್ವಿ ರನ್ ಚೇಸ್ ದಾಖಲೆಯನ್ನು ಭಾರತ ತನ್ನ ಮುಡಿಗೇರಿಸಿಕೊಂಡಿದೆ.

ತಂಡದ ನಾಯಕ ಶುಭ್‌ಮನ್ ಗಿಲ್ ಅವರ ಮುಂದಾಳತ್ವದಲ್ಲಿ 406 ರನ್ ಗಳ ಗುರಿಯನ್ನು ಭಾರತ ಸಾಧಿಸಿದೆ. ಭಾರತವು ಕೇವಲ 43.3 ಓವರ್‌ಗಳಲ್ಲಿ 2 ವಿಕೆಟ್‌ಗೆ 406 ರನ್ ಗೆಲುವು ತನ್ನದಾಗಿಸಿಕೊಂಡಿತು. 26 ಬೌಂಡರಿ ಹಾಗೂ ಎಂಟು ಸಿಕ್ಸರ್‌ಗಳ ನೆರವಿನಿಂದ 133 ಎಸೆತಗಳಲ್ಲಿ ಭರ್ಜರಿ 223 ರನ್ ಸಿಡಿಸಿದರು. ರೋಹಿತ್ ಶರ್ಮಾ ಶತಕ ಬಾರಿಸಿದರು.
ಋತುರಾಜ್ ಗಾಯಕ್ವಾಡ್ 31 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 405/7 ರನ್ ಗಳಿಸಿತ್ತು, ಇದು ಅವರ ಇದುವರೆಗಿನ ಏಕದಿನ ಕ್ರಿಕೆಟ್‌ನ ಅತ್ಯಧಿಕ ಮೊತ್ತವಾಗಿತ್ತು. ಜಾನ್ ಕ್ಯಾಂಪ್‌ಬೆಲ್ 101, ಶಾಯ್ ಹೋಪ್ 104 ಮತ್ತು ಅಮೀರ್ ಜಾಂಗೂ 114 ರನ್ ಗಳಿಸಿದರು, ಈ ಮೂವರೂ ಒಂದೇ ಇನ್ನಿಂಗ್ಸ್‌ನಲ್ಲಿ ಶತಕಗಳನ್ನು ಬಾರಿಸಿದರು.

















