ಮಂಗಳೂರು: ನಗರದ ಹೊರವಲಯದ ಕಳವಾರು ಥರ್ಡ್ಸ್ ಫೇಸ್ ವ್ಯಾಪ್ತಿಯಲ್ಲಿ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದೆ.
ಎಂಆರ್‌ಪಿಎಲ್‌ನ (MRPL) ಸಿಎಸ್‌ಟಿ ಘಟಕದಲ್ಲಿ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದ್ದು, ಸದ್ದಿನ ತೀವ್ರತೆ ಹಾಗೂ ರಭಸಕ್ಕೆ ಸಮೀಪದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಿಟಕಿ ಗಾಜುಗಳು ಪುಡಿಯಾಗಿವೆ.
ದಿಢೀರ್ ಸಂಭವಿಸಿದ ಸ್ಫೋಟದಿಂದ ಸ್ಥಳೀಯ ಜನರಲ್ಲಿ ಭೀತಿ ಆವರಿಸಿದ್ದು, ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.



















