ಐಪಿಎಲ್‌ ಅಂಗಣಕ್ಕೆ ಪತಂಜಲಿ?

ಮುಂಬಯಿ, ಆ. 10:ಈ ಸಲದ ಐಪಿಎಲ್‌  ಕೂಟದಲ್ಲಿ ಅಪ್ಪಟ ದೇಶೀಯ ಉತ್ಪನ್ನಗಳು ಕಾಣ ಸಿಕ್ಕಿದರೆ ಆಶ್ಚರ್ಯ ಪಡಬೇಡಿ. ವಿವೊ ನಿರ್ಗಮನದಿಂದ ತೆರವಾಗಿರುವ ಐಪಿಎಲ್‌ ಪ್ರಾಯೋಜಕತ್ವಕ್ಕೆ ಬಾಬಾ ರಾಮ್‌ ದೇವ್‌ ಅವರ ಪತಂಜಲಿ ಬಿಡ್ಡಿಂಗ್‌  ನಡೆಸುವ ಆಸಕ್ತಿ ತೋರಿಸಿದೆ.

ದೇಶದಲ್ಲಿ ಈಗಾಗಲೇ ಸಖತ್‌ ಜನಪ್ರಿಯವಾಗಿರುವ ಪತಂಜಲಿ ಐಪಿಎಲ್‌ ಮೂಲಕ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಹಾಕಲು ಪ್ರಯತ್ನಿಸುತ್ತಿದೆ.

ಪತಂಜಲಿ ಐಪಿಎಲ್‌ ಪ್ರಾಯೋಜಕತ್ವಕ್ಕೆ ಆಸಕ್ತಿ ಹೊಂದಿರುವುದನ್ನು ಸಂಸ್ಥೆಯ ವಕ್ತಾರ ಎಸ್.‌ ಕೆ. ತಿಜರವಾಲಾ ದೃಢಪಡಿಸಿದ್ದಾರೆ.

 

error: Content is protected !!
Scroll to Top