ಸೇವಾ ಸಂಕಲ್ಪ ಅಭಿಯಾನ: ಕಾರ್ಕಳದಲ್ಲಿ ಅಂಗನ್ ಕಾ ಮಿಲನ್

ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರಿಗೆ ‌ಸನ್ಮಾನ

ಕಾರ್ಕಳ: ಪ್ರಧಾನಿ ಮೋದಿ ಅವರ ಸಾರ್ವಜನಿಕ ಸೇವೆಗೆ 25 ವರ್ಷಗಳಾದ‌ ಹಿನ್ನೆಲೆ ನಡೆಯುತ್ತಿರುವ ಸೇವಾ ಸಂಕಲ್ಪ ಅಭಿಯಾನದ‌ ಅಂಗವಾಗಿ ಕುಕ್ಕುಂದೂರು ಗ್ರಾಮ ಮತ್ತು ಕಾರ್ಕಳ ನಗರದ ಅಂಗನವಾಡಿಗಳ ‘ಅಂಗನ್ ಕಾ ಮಿಲನ್’ ಕಾರ್ಯಕ್ರಮ ಕಾರ್ಕಳದ ‌ವಿಕಾಸ ಕಚೇರಿಯಲ್ಲಿ ನಡೆಯಿತು.

ಕುಕ್ಕುಂದೂರು ಗ್ರಾಮದ ವ್ಯಾಪ್ತಿಯಲ್ಲಿ ಬರುವ 12 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರು ಮತ್ತು ಸಹಾಯಕಿಯರಿಗೆ, ಕಾರ್ಕಳ ನಗರದ 9 ಅಂಗನವಾಡಿ ಕೇಂದ್ರದ ಕಾರ್ಯಕರ್ತರು ಮತ್ತು ಸಹಾಯಕಿಯರಿಗೆ ಗೌರವ ಸನ್ಮಾನ ಮಾಡಲಾಯಿತು.

ಶಾಸಕ ಸುನಿಲ್ ಕುಮಾರ್ ಮಾತನಾಡಿ, ಪ್ರಧಾನಿ ಮೋದಿಯವರ ಜನ್ಮ ದಿನದ ಹಿನ್ನಲೆಯಲ್ಲಿ ಬಿಜೆಪಿ ಒಂದು ತಿಂಗಳ ಕಾಲ ಬೇರೆ ಬೇರೆ ರೂಪದಲ್ಲಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಗುಜರಾತಿನ ಮುಖ್ಯಮಂತ್ರಿಗಳಾದ ಬಳಿಕ ಮೋದಿಯವರು 25 ವರ್ಷ ಸಾರ್ವಜನಿಕ ಬದುಕನ್ನು ಪೂರ್ಣಗೊಳಿಸಿದ್ದಾರೆ. ಯಾರು ಸಮಾಜದಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಾರೋ ಅಂತಹ ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಎಂದು ಕರೆ ಕೊಟ್ಟಿದ್ದರಿಂದ ದೇಶಾದ್ಯಂತ ಅಂಗನವಾಡಿ ಕಾರ್ಯಕರ್ತರನ್ನು ಸನ್ಮಾನಿಸುವ ಕಾರ್ಯ ನಡೆಸಲಿದೆ ಎಂದು ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ ಹೊಸದೇನಲ್ಲ. ಸರಕಾರದ ಯಾವುದೇ ಕಾರ್ಯಕ್ರಮ ಬಂದರೂ ಮುಂಚೂಣಿಯಲ್ಲಿ ನಿಂತು ನಿಭಾಯಿಸುವವರು ಅಂಗನವಾಡಿ ಕಾರ್ಯಕರ್ತರೇ. ಅವರು ಮಾಡುವ ಕೆಲಸ ಕಾರ್ಯಗಳನ್ನು ಗಮನಿಸಿದ್ದೇವೆ.  ಅವರ ಕೆಲಸವನ್ನು ಸರ್ಕಾರ ಹಾಗೂ ಸರ್ಕಾರೇತರ ಸಂಘಸಂಸ್ಥೆಗಳು ಗುರುತಿಸಿವೆ. ನಮ್ಮ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತರನ್ನು ಒಂದೇ ಕಡೆ ಸೇರಿಸಿ ಸನ್ಮಾನಿಸುವ ಆಲೋಚನೆ ಇತ್ತು. ಮಹಿಳಾ ಮೋರ್ಚಾ ವತಿಯಿಂದ ಗ್ರಾಮ ಮಟ್ಟದಲ್ಲಿ ನಿಮ್ಮನ್ನು ಸನ್ಮಾನಿಸುವ ಕಾರ್ಯ ಮುಂದುವರಿಯಲಿದೆ ಎಂದಿದ್ದಾರೆ.

ಅಂಗನವಾಡಿ ಕಾರ್ಯಕರ್ತರಿಗೆ ಸಿಗುವ ಗೌರವ ಧನ ಬಹಳ ಕಡಿಮೆ. ಪ್ರತಿ ಬಾರಿ ಗೌರವ ಧನ ಹೆಚ್ಚಳದ ಆಗ್ರಹ ಇದ್ದಿದ್ದೇ. ಕಾಲಕಾಲಕ್ಕೆ ಸರಕಾರಗಳು ಅಲ್ಪಸ್ವಲ್ಪ  ಗೌರವ ಧನ ಹೆಚ್ಚಳ ಮಾಡುವ ಕಾರ್ಯ ನಡೆಸಿಕೊಂಡು ಬಂದಿದೆ. ಅವರ ಸೇವೆಯನ್ನು ಗುರುತಿಸುವುದು ನಾಗರಿಕ ಸಮಾಜದ ಕರ್ತವ್ಯ. ಇಷ್ಟು ವರ್ಷದ ನಿಮ್ಮ ಸೇವೆಯನ್ನು ಸ್ಮರಿಸುವ ಕಾರ್ಯ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಮಹಿಳಾ ಮೋರ್ಚಾ ನಡೆಸಿರುವುದು ಸಂತಸದ ವಿಚಾರ ಎಂದು ನುಡಿದಿದ್ದಾರೆ.

ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್‌, ಉಪಾಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಉಷಾ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಕಾರ್ಯದರ್ಶಿ ಶೋಭಾ ಭಾಸ್ಕರ್‌, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್‌, ಕಾರ್ಕಳ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ವಿನಯಾ ಡಿ. ಬಂಗೇರಾ, ಪ್ರಭಾರಿ ರವೀಂದ್ರ ಕುಮಾರ್‌, ಪ್ರಧಾನ ಕಾರ್ಯದರ್ಶಿ ವಿನುತಾ ಆಚಾರ್ಯ, ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಸುಮಾ ಕೇಶವ್‌, ಒಬಿಸಿ ಮೋರ್ಚಾ ಅಧ್ಯಕ್ಷ ಪ್ರಸಾದ್‌ ಐಸಿರ, ನಗರಾಧ್ಯಕ್ಷ ನಿರಂಜನ್‌ ಜೈನ್‌, ಕಾರ್ಕಳ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಮಮತಾ ಸುವರ್ಣ ಮತ್ತು ಮಹಿಳಾ ಮೋರ್ಚಾ ಕಾರ್ಯರ್ತರು ಉಪಸ್ಥಿತರಿದ್ದರು. ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ರಮೇಶ್‌ ಕಾರ್ಯಕ್ರಮ ನಿರ್ವಹಿಸಿದರು.





































error: Content is protected !!
Scroll to Top