ಹೊಟೇಲ್‌ಗಳಲ್ಲಿ ಆಹಾರ ದರ ಏರಿಕೆಯ ಸಾಧ್ಯತೆ
ನವದೆಹಲಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ 62.50 ಏರಿಕೆಯಾಗುವ ಮೂಲಕ ಗ್ರಾಹಕರಿಗೆ ತಿಂಗಳ ಆರಂಭದಲ್ಲೇ ಫಿನಾನ್ಶಿಯಲ್ ಶಾಕ್ ಹೊಡೆದ ಅನುಭವವಾಗಿದೆ.
ದೇಶದಲ್ಲಿ ಹಬ್ಬದ ಸೀಸನ್‌ಗೂ ಮುನ್ನ ಹೊಟೇಲ್, ರೆಸ್ಟೋರೆಂಟ್ ಹಾಗೂ ಡಾಬಾಗಳಿಗೆ ಈ ಬೆಲೆ ಏರಿಕೆ ದೊಡ್ಡ ಮಟ್ಟದಲ್ಲಿ ಬರೆ ಎಳೆದಂತಾಗಿದೆ. ನಿರ್ವಹಣಾ ವೆಚ್ಚದ ಮೇಲೆಯೂ ಪರಿಣಾಮ ಬೀರಲಿದೆ. ಗ್ಯಾಸ್ ಬೆಲೆ ಹೆಚ್ಚಾದ ಹಿನ್ನೆಲೆ ಹೊಟೇಲ್‌ಗಳಲ್ಲಿ ಊಟ ತಿಂಡಿಯ ದರ ಏರಿಕೆಯಾಗುವ ಸಾಧ್ಯತೆ ಇದೆ.

ನವದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯು 62.50 ರೂ.ಗಳಷ್ಟು ಏರಿಕೆಯಾಗಿ 2,810 ರೂ. ತಲುಪಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್‌ನಲ್ಲಿ 2,747.50 ರೂಪಾಯಿಗಳಷ್ಟಿತ್ತು. ಇಂದಿನಿಂದಲೇ ಹೊಸ ದರ ಜಾರಿಯಾಗಲಿದ್ದು, ಗೃಹಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ರೀತಿಯ ಹೊಸ ಬದಲಾವಣೆಗಳಾಗಿಲ್ಲ.








































