ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಲು ‘ಅನ್ನಸೇವೆ’ ಆ್ಯಪ್

ಬೆಂಗಳೂರು: ಇ-ಕೆವೈಸಿ ಮಾಡಲು ಅನುಕೂಲವಾಗುವಂತೆ ಆ್ಯಪ್ ಒಂದನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಇ-ಕೆವೈಸಿ ಮಾಡಿಸಲು ಸರ್ವರ್ ಸಮಸ್ಯೆಯಿಂದ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇತ್ತು. ಇದರಿಂದ ಜನರಿಗೆ ಮುಕ್ತಿ ನೀಡಿ ಸುಲಭವಾಗಿ ಇ-ಕೆವೈಸಿ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುವಂತೆ ಈ ಆ್ಯಪ್ ಅನ್ನು ಅಭಿವೃದ್ಧಿ ಮಾಡಲಾಗಿದೆ. ರಾಜ್ಯದ ಆಹಾರ ಮತ್ತು ನಾಗರಿಕ ಇಲಾಖೆ ಇದನ್ನು ಬಿಡುಗಡೆ ಮಾಡಿರುವುದಾಗಿದೆ.

ಅನ್ನಸೇವೆ ಎಂಬ ಹೆಸರಿನಲ್ಲಿ ಈ ಆ್ಯಪ್ ಬಿಡುಗಡೆ ಮಾಡಲಾಗಿದೆ. ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಲು ಇದನ್ನು ಬಳಕೆ ಮಾಡಬಹುದು. ಸದ್ಯ ಬೆಂಗಳೂರು ನಗರ, ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್, ಕೊಪ್ಪಳದಲ್ಲಿ ಆಪ್ ಲಾಂಚ್ ಆಗಿದೆ. 20 ದಿನದ ಬಳಿಕ ಅಧಿಕೃತವಾಗಿ 31 ಜಿಲ್ಲೆಗೆ ಸಿಗುವಂತೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.





































error: Content is protected !!
Scroll to Top