ಕಾರ್ಕಳ: ಲಕ್ಕಿ ಗಿಫ್ಟ್ ಸ್ಕೀಮ್‌ಗೆ ಹಣ ಕಟ್ಟಿ ಮೋಸ ಹೋಗಿರುವುದಕ್ಕೆ ಸಂಬಂಧಿಸಿದ ಹಾಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗೆಗೆ ಮರ್ಣೆ ಗ್ರಾಮದ ರಶ್ಮಿ ಕುಲಾಲ್(24) ಎಂಬವರು ದೂರು ನೀಡಿದ್ದಾರೆ.
ಆರೋಪಿ ಜಯತೀರ್ಥ ಎಂಬವರು ಕುಕ್ಕಂದೂರು ಗ್ರಾಮದ ಜೋಡುರಸ್ತೆಯಲ್ಲಿ ಶ್ರೀ ದುರ್ಗಾ ಇಲೆಕ್ಟ್ರಾನಿಕ್ಸ್ & ಫರ್ನಿಚರ್ ಅಂಗಡಿ ನಡೆಸುತ್ತಿದ್ದು, ರಶ್ಮಿ ಅವರು ಅಲ್ಲಿ ನಡೆಯುತ್ತಿದ್ದ ಲಕ್ಕಿ ಗಿಫ್ಟ್ ಸ್ಕೀಂ ಒಂದಕ್ಕೆ ಸೇರಿಕೊಂಡಿದ್ದರು. ಪ್ರತಿ ತಿಂಗಳು 1,000 ರೂ. ಗಳಂತೆ ಇಪ್ಪತ್ತು ತಿಂಗಳು 20,000 ರೂ. ಹಣ ಕಟ್ಟಿದ್ದರೂ ಸಹ ಕೊನೆಗೆ ಯಾವುದೇ ಲಕ್ಕಿ ಡ್ರಾ ನಡೆಸದೆ, ಗಿಫ್ಟ್ ನೀಡದೆ ಕೊನೆಗೆ ಕಟ್ಟಿದ ಹಣವನ್ನು ಸಹ ಹಿಂದಿರುಗಿಸದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.


















