ವಾಷಿಂಗ್ಟನ್, ಆ. 7 : ಭಾರತ ಚೀನಾದ ಟಿಕ್‌ಟಾಕ್, ವಿ ಚಾಟ್ ಮೊದಲಾದ 100ಕ್ಕೂ ಅಧಿಕ ಆ್ಯಪ್‌ಗಳಿಗೆ ಗೇಟ್‌ಪಾಸ್ ನೀಡಿದ ಬೆನ್ನಲ್ಲೇ ಅಮೆರಿಕಾವೂ ಟಿಕ್‌ಟಾಕ್, ವಿಚಾಟ್‌ಗಳನ್ನು ನಿಷೇಧಿಸಲು ಮುಂದಾಗಿದೆ. ಈ ಸಂಬಂಧ ಅಧ್ಯಕ್ಷ ಡ್ರೊನಾಲ್ಡ್ ಟ್ರಂಪ್ ನಿನ್ನೆಯಷ್ಟೇ ಅಧಿಕೃತ ಆದೇಶವನ್ನೂ ಹೊರಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಟ್ರಂಪ್, ಟಿಕ್‌ಟಾಕ್ ನಂತಹ ಆ್ಯಪ್‌ಗಳ ಮೂಲಕ ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ ಚೀನ ಮಾಹಿತಿ ಕಲೆ ಹಾಕುತ್ತಿದೆ. ಜನರ ವೈಯಕ್ತಿಕ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕೂ ಪ್ರಯತ್ನ ನಡೆಸುತ್ತಿದೆ. ಆದ್ದರಿಂದಾಗಿ ಈ ಕ್ರಮಕ್ಕೆ ಅಮೆರಿಕ ಮುಂದಾಗಿರುವುದಾಗಿ ಹೇಳಿದ್ದಾರೆ. ದೇಶದ ವಿದೇಶಿ ನೀತಿ, ಆರ್ಥಿಕತೆಯ ಮೇಲೆಯೂ ಚೀನ ಆ್ಯಪ್‌ಗಳು ದುಷ್ಪರಿಣಾಮ ಬೀರುತ್ತಿವೆ. ಆದ್ದರಿಂದಾಗಿ ಟಿಕ್‌ಟಾಕ್‌ನಂತಹ ಚೀನದ ಮೊಬೈಲ್ ಆ್ಯಪ್‌ಗಳ ಮೇಲೆ ಅಮೆರಿಕ ಕ್ರಮ ತೆಗೆದುಕೊಳ್ಳುತ್ತಿದೆ ಎಂದೂ ಟ್ರಂಪ್ ಹೇಳಿದ್ದಾರೆ.
ಚೀನದ ಕುತಂತ್ರಿ ಬುದ್ಧಿಗೆ ಪಾಠ ಕಲಿಸಲು, ಆರ್ಥಿಕ ಹೊಡೆತ ನೀಡಲು ಭಾರತ ಮೊದಲು ಚೈನೀಸ್ ಆ್ಯಪ್‌ಗಳನ್ನು ನಿಷೇಧ ಮಾಡಿದ್ದು, ಇದೀಗ ಅದೇ ಕಾರಣಗಳನ್ನು ನೀಡಿ ಅಮೆರಿನವೂ ಚೀನಾಗೆ ಪಾಠ ಕಲಿಸುವಲ್ಲಿ ಅಧಿಕೃತ ಹೆಜ್ಜೆ ಇಟ್ಟಿದೆ.