ನಾಳೆ ಮೋದಿಯಿಂದ ರಾಷ್ಟ್ರೀಯ ಸ್ವಚ್ಛತಾ ಕೇಂದ್ರಕ್ಕೆ ಚಾಲನೆ

ದಿಲ್ಲಿ, ಆ. 7: ಪ್ರಧಾನಿ ನರೇಂದ್ರ ಮೋದಿ ಶನಿವಾರ ಸ್ವಚ್ಛ ಭಾರತ ಮಿಶನ್‌ ನ ಸಂವಾದ ಕೇಂದ್ರವಾದ ರಾಷ್ಟ್ರೀಯ ಸ್ವಚ್ಛತಾ ಕೇಂದ್ರಕ್ಕೆ ಚಾಲನೆ ನೀಡಲಿದ್ದಾರೆ.

2017, ಎ.10ರಂದು ಮಹಾತ್ಮ ಗಾಂಧೀಜಿಯ ಚಂಪಾರಣ ಸತ್ಯಾಗ್ರಹದ ಶತಮಾನೋತ್ಸವ ಸಂದರ್ಭದಲ್ಲಿ ಮೋದಿ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು ಸ್ಥಾಪಿಸುವ ಕುರಿತು ಘೋಷಿಸಿದ್ದರು.

ರಾಜ್‌ ಘಾಟ್‌ ಬಳಿ ಸ್ಥಾಪಿಸಲಾಗಿರುವ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಮೋದಿ ದಿಲ್ಲಿಯ 36 ಶಾಲಾ ವಿದ್ಯಾರ್ಥಿಗಳ ಜೊತೆಗೆ  ಸಂವಾದ ನಡೆಸಲಿದ್ದಾರೆ. ಈ 36 ವಿದ್ಯಾರ್ಥಿಗಳು ದೇಶದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುತ್ತಾರೆ.

 

 error: Content is protected !!
Scroll to Top