ಇಡುಕ್ಕಿ ಭೂ ಕುಸಿತ : ಸಾವಿನ ಸಂಖ್ಯೆ  12ಕ್ಕೇರಿದೆ

0

ಇಡುಕ್ಕಿ, ಆ. 7 : ಕೇರಳದ ಇಡುಕ್ಕಿಯ ಪೆಟ್ಟಿಮುಡಿಯಲ್ಲಿ ಭಾರಿ ಮಳೆಯ ಪರಿಣಾಮವಾಗಿ ಇಂದು ಮುಂಜಾನೆ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ. ಇನ್ನೂ sumaru 100 ಮಂದಿ ಮಣ್ಣಿನ ರಾಶಿಯಡಿ ಸಿಕ್ಕಿಬಿದ್ದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿಯಿದೆ.

10 ಮಂದಿಯನ್ನು ಮಣ್ಣಿನಡಿಯಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಇಡುಕ್ಕಿ ಜಿಲ್ಲಾಧಿಕಾರಿ ಎಚ್.‌ ದಿನೇಶನ್‌ ಹೇಳಿದ್ದಾರೆ.

ಭೂಕುಸಿತದಿಂದಾಗಿ ಹಲವು ಊರುಗಳು ಸಂಪರ್ಕ ಟಡಿದುಕೊಂಡಿವೆ.ಅವರನ್ನು ಪಾರು ಮಾಡಲು ವಾಯುಪಡೆ ಸಹಾಯ ಕೇಳಿದ್ದರೂ ಪ್ರತಿಕೂಲ ಹವಾಮಾನದಿಂದಾಗಿ ವಾಯುಪಡೆ ರಕ್ಷಣಾ ಕಾರ್ಯ ವಿಳಂಬವಾಗುತ್ತಿದೆ.

Previous articleಸೋಮವಾರ sslc ಫಲಿತಾಂಶ
Next articleನಾಳೆ ಮೋದಿಯಿಂದ ರಾಷ್ಟ್ರೀಯ ಸ್ವಚ್ಛತಾ ಕೇಂದ್ರಕ್ಕೆ ಚಾಲನೆ

LEAVE A REPLY

Please enter your comment!
Please enter your name here