ಉಡುಪಿ, ಆ. 5 : ಕೊರೊನಾ ಸೋಂಕು ತಗಲುವುದರಿಂದ ಪಾರಾಗಲು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಎಂದು ಎಷ್ಟು ಹೇಳಿದರೂ ಜನರು ಕಿವಿ ಮೇಲೆ ಹಾಕುತ್ತಿಲ್ಲ. ಈಗಲೂ ಜನರು ಈ ಎಚ್ಚರಿಕೆ ನಮಡಲ್ಲ, ಕೊರೊನಾ ನಮಗೇನೂ ಮಾಡದು ಎಂಬ ಹುಂಬ ಧೈರ್ಯದಲ್ಲಿ ತಿರುಗಾಡುತ್ತಿದ್ದಾರೆ. ಇದೀಗ ಪೊಲೀಸರು ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.
ಮಾಸ್ಕ್ ಧರಿಸದೆ ಓಡಾಡುತ್ತಿದ್ದವರ ವಿರುದ್ಧ ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿರುವ ಪೊಲೀಸರು 24 ತಾಸುಗಳಲ್ಲಿ ರೂ. 11500 ದಂಡ ವಸೂಲು ಮಾಡಿದ್ದಾರೆ.
ನಗರ ಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯ 2000 ರೂ. ಹಾಗೂ ಪಂಚಾಯತ್ ವ್ಯಾಪ್ತಿಯ 9500 ರೂ. ಸಾರ್ವಜನಿಕರು ಮಾಸ್ಕ್ ಧರಿಸದೇ ಕಾನೂನು ಉಲ್ಲಂಘಿಸಿದ ಪ್ರಕರಣ ದಾಖಲಿಸಿ, ದಂಡ ವಸೂಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.