ಪತ್ರಕರ್ತ ಶರತ್‌ ಶೆಟ್ಟಿ ಅವರಿಗೆ ಶ್ರೀನಿವಾಸ್‌ ಭಟ್‌ ಪ್ರಶಸ್ತಿ

ಕಾರ್ಕಳ : ಪತ್ರಕರ್ತ, ನಾಟಕ ಕಲಾವಿದ ಶರತ್‌ ಶೆಟ್ಟಿ ಸಂಕಲಕರಿಯ ಅವರು ಯಕ್ಷಲಹರಿ ಸ್ಥಾಪಕಾಧ್ಯಕ್ಷ ದಿ. ಇ. ಶ್ರೀನಿವಾಸ್‌ ಭಟ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಲಾವಿದರಿಗೆ ಪ್ರತಿವರ್ಷ ಕೊಡಮಾಡುವ ಶ್ರೀನಿವಾಸ್‌ ಭಟ್‌ ಪ್ರಶಸ್ತಿಗೆ ಈ ವರ್ಷ  ಶರತ್‌ ಅವರು ಆಯ್ಕೆಗೊಂಡಿದ್ದು, ಆ. 3ರಂದು ಮೂಡಬಿದ್ರೆಯ ಧನುಲಕ್ಷ್ಮೀ ನಿವಾಸದ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ವಿಜಯ ಕಲಾವಿದರು ಕಿನ್ನಿಗೋಳಿ ತಂಡದ ಸಂಚಾಲಕರಾಗಿರುವ ಇವರು ರಾಜ್ಯ ಮಾತ್ರವಲ್ಲದೇ ದೇಶದ ವಿವಿಧೆಡೆ ನಾಟಕ ಪ್ರದರ್ಶನ ಮಾಡಿರುತ್ತಾರೆ. ಸಂಘ-ಸಂಸ್ಥೆಗಳಲ್ಲಿ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರನ್ನು ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ.

 

error: Content is protected !!
Scroll to Top