ಒಂದೇ ದಿನ ದೇಶದಲ್ಲಿ 57,117 ಮಂದಿಗೆ ಕೊರೊನಾ ಸೋಂಕು

ದಿಲ್ಲಿ, ಆ.1  : ದೇಶದಲ್ಲಿ ಕೊರೊನಾ ಹಾವಳಿ ತಡೆಯಿಲ್ಲದೆ ಮುಂದುವರಿದಿದೆ. ಶನಿವಾರ ಮತ್ತೊಂದು ದಾಖಲೆ ನಿರ್ಮಾಣವಾಗಿದ್ದು, 24 ತಾಸುಗಳಲ್ಲಿ ದೇಶದಾದ್ಯಂತ 57,117 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದು ಈ ವರೆಗಿನ ದೈನಂದಿನ ದಾಖಲೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 16,95,988ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

ಮತ್ತೊಂದೆಡೆ ಒಂದೇ ದಿನ 764 ಮಂದಿ ಸಾವನ್ನಪ್ಪುವುದರೊಂದಿಗೆ  ಈ ವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 36,511ನ್ನು ಮುಟ್ಟಿದೆ. ಇದೇ ವೇಳೆ 16,95,988 ಮಂದಿ ಸೋಂಕಿತರ ಪೈಕಿ 10,94,374 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿನ್ನೂ 5,65,103 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. 

ಮಹಾರಾಷ್ಟ್ರದಲ್ಲಿ ಶುಕ್ರವಾರ ಅತೀಹೆಚ್ಚು 265 ಮಂದಿ ಕೊರೋನಾಕ್ಕೆ ಬಲಿಯಾಗಿದ್ದರೆ, ತಮಿಳುನಾಡಿನಲ್ಲಿ 94,ಕರ್ನಾಟಕ 84, ಆಂಧ್ರಪ್ರದೇಶ 68, ಉತ್ತರಪ್ರದೇಶದಲ್ಲಿ 43 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. error: Content is protected !!
Scroll to Top