ಕಾರ್ಕಳ : ಕಥೊಲಿಕ್ ಸಭಾ ಕಾರ್ಕಳ ವಲಯ ಇದರ ವತಿಯಿಂದ ಅಜೆಕಾರಿನ ಕ್ಯಾನ್ಸರ್ ಪೀಡಿತ ವ್ಯಕ್ತಿಯ ಚಿಕಿತ್ಸೆಗಾಗಿ ರೂ. 5000 ನೀಡಲಾಯಿತು. ಕಥೋಲಿಕ್ ಸಭಾ ವಲಯಾಧ್ಯಕ್ಷ ರಾಬರ್ಟ್ ಮಿನೇಜಸ್ ಚೆಕ್ ಹಸ್ತಾಂತರಿಸಿದರು. ಸಭಾದ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಡಿಸೋಜಾ, ಕಾರ್ಯದರ್ಶಿ ಓಲಿವಿಯಾ ಡಿಮೆಲ್ಲೊ, ಖಜಾಂಚಿ ಥಾಮಸ್ ನಜ್ರೆತ್ ಸೇರಿದಂತೆ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.