ದಿಲ್ಲಿ, ಜು. 30 : ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಡ್ರ ಹಲವು ವರ್ಷಗಳಿಂದ ವಾಸವಾಗಿದ್ದ ದಿಲ್ಲಿಯ ಐಷಾರಾಮಿ ಲುಟೆನ್ಸ್ ಪ್ರದೇಶದ ಲೋಧಿ ಎಸ್ಟೇಟ್ 35 ರಲ್ಲಿದ್ದ ಸರ್ಕಾರಿ ಬಂಗಲೆ ಖಾಲಿ ಮಾಡಿದ್ದಾರೆ.
ಎಸ್‌ಪಿಜಿ ಭದ್ರತಾ ಸೌಲಭ್ಯವನ್ನು ಕಳೆದುಕೊಂಡ ನಂತರ ಸರ್ಕಾರಿ ನಿಯೋಜಿತ ಬಂಗಲೆಯಲ್ಲಿ ವಾಸಿಸಲು ಅರ್ಹರಲ್ಲ ಎಂದು ಹೇಳಲಾಗಿತ್ತು. ಆಗಸ್ಟ್ 1 ರೊಳಗೆ ಈ ಬಂಗಲೆ ಖಾಲಿ ಮಾಡುವಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪ್ರಿಯಾಂಕಾ ಅವರಿಗೆ ಹೇಳಿತ್ತು. ಈ ಹಿನ್ನಲೆಯಲ್ಲಿ ಪ್ರಿಯಾಂಕ ಅವರು ಸರ್ಕಾರಿ ಬಂಗಲೆಯನ್ನು ಜುಲೈ 30 ರಂದು ತೊರೆದಿದ್ದಾರೆ.
ಈ ವಿಷಯದ ಬಗ್ಗೆ ರಾಜಕೀಯ ಆಕ್ರೋಶವನ್ನು ಸೃಷ್ಟಿಸಲು ಕಾಂಗ್ರೆಸ್ ನಾಯಕರು ಸಾಕಷ್ಟು ಪ್ರಯತ್ನಿಸಿದ್ದರೂ, ಪ್ರಿಯಾಂಕಾ ಅವರು ಆದೇಶಗಳಿಗೆ ಬದ್ಧರಾಗಿರುವುದಾಗಿ ಹೇಳಿದ್ದಾರೆ. ಸರ್ಕಾರಿ ಬಂಗಲೆ ಈಗ ಬಿಜೆಪಿ ಸಂಸದ ಅನಿಲ್ ಬಲೂನಿಗೆ ಹಂಚಿಕೆ ಮಾಡಲಾಗಿದೆ.