ದಕ್ಷಿಣ ಕನ್ನಡ ಲಾಕ್ ಡೌನ್ ಗೆ ಮಾರ್ಗಸೂಚಿ ಬಿಡುಗಡೆ

ಮಂಗಳೂರು : ಕೊರೊನಾ ಸೋಂಕು ಸೋಂಕು ಹರಡುವಿಕೆಯ ಸರಪಣಿಯನ್ನು ತುಂಡರಿಸಲು ದ.ಕ. ಜಿಲ್ಲಾಡಳಿತ ಮತ್ತೆ ಲಾಕ್ ಡೌನ್ ಮೊರೆ ಹೋಗಿದೆ. ಜಿಲ್ಲೆಯಾದ್ಯಂತ ಕೋವಿಡ್ 19 ಸೋಂಕಿನ ಹಬ್ಬುವಿಕೆ ಏರುಗತಿಯಲ್ಲಿದೆ.

ಇದರನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 16 ರಾತ್ರಿ 8ರಿಂದ ಜುಲೈ 23ರ ಬೆಳಿಗ್ಗೆ 5 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಏನಿರುತ್ತೆ? :
* ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ.

* ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ.

* ದಿನಸಿ, ಹಣ್ಣು, ತರಕಾರಿ ಮಾಂಸದ ಅಂಗಡಿಗಳು ಓಪನ್ ಇರುತ್ತವೆ.

*ಹೆದ್ದಾರಿಗಳಲ್ಲಿ ಸರಕುಸಾಗಾಟ ವಾಹನಗಳಿಗೆ ಮಾತ್ರ ಅವಕಾಶ

* ಆರೋಗ್ಯ ಸೇರಿದಂತೆ ತುರ್ತು ಸೇವೆಗಳು ಲಭ್ಯ

* ಅಗತ್ಯ ಸರ್ಕಾರಿ ಕಚೇರಿಗಳು ಓಪನ್

ಏನಿರಲ್ಲ ?

*ಬಾರ್, ಮಾಲ್, ವೈನ್ ಶಾಪ್ ಗಳು ಸಂಪೂರ್ಣ ಬಂದ್

* ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳೂ ಸಂಪೂರ್ಣ ಬಂದ್

* ಕಂಟೈನ್ಮೆಂಟ್ ಝೋನ್ ಸಂಪೂರ್ಣ ಬಂದ್

* ಸಾರ್ವಜನಿಕ, ಖಾಸಗಿ ಸಾರಿಗೆ ಸಂಚಾರ ಬಂದ್

error: Content is protected !!
Scroll to Top