ಕೊರೊನಾ ಕಾವಳ : 24 ತಾಸುಗಳಲ್ಲಿ ಗಳಲ್ಲಿ 29,429 ಮಂದಿಗೆ ಸೋಂಕು

ಸೋಂಕಿತರ ಸಂಖ್ಯೆ 9.36 ಲಕ್ಷ

ದೇಶದಲ್ಲಿ ಕೊರೊನಾ ಕಳವಳಕಾರಿಯಾಗಿ ಮು<ದುವರಿದಿದೆ.  ಕಳೆದ 24ತಾಸುಗಳಲ್ಲಿ  29,429 ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,36,6181ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ. 

ದಿಲ್ಲಿ : ದೇಶದಾದ್ಯಂತ ಕೊರೋನಾ ಮಹಾಸ್ಫೋಟ ಸಂಭವಿಸಿದ್ದು, ಕಳೆದ 24 ತಾಸುಗಳಲ್ಲಿ  29,429 ಮಂದಿಗೆ ಮಾರಕ  ವೈರಸ್ ತಗಲಿಕೊಂಡಿದೆ. ಬುಧವಾರ ಬಿಳಗ್ಗಿನ ಮಾಹಿತಿ ಪ್ರಕಾರ  ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,36,6181ಕ್ಕೆ ತಲುಪಿದೆ. ಈ ನಡುವೆ ಒಂದೇ ದಿನ 582 ಮಂದಿ ಮಹಾಮಾರಿ ವೈರಸ್’ಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ ಕೂಡ 24,309ಕ್ಕೆ ಏರಿಕೆಯಾಗಿದೆ.  

ದೇಶದ  9,36,6181 ಮಂದಿ ಸೋಂಕಿತರ ಪೈಕಿ 5,92,032 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 3,19,840 ಮಂದಿ ಸಕ್ರಿಯ ಸೋಂಕಿತರಿದ್ದಾರೆಂದು ವರದಿಗಳು ತಿಳಿಸಿವೆ. 

ಈ ನಡುವೆ ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,67,665 ತಲುಪಿದ್ದು, 10,695 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ 1,47,324 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, 2,099 ಮಂದಿ ಬಲಿಯಾಗಿದ್ದಾರೆ. 

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 1,15,346 ತಲುಪಿದ್ದು, 3,446 ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.



































































































































































error: Content is protected !!
Scroll to Top