ಗ್ರಾಮ ಪಂಚಾಯತ್ ಸದಸ್ಯನ ಕೊಲೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯ ಯಾಕೂಬ್ ಮೇಲೆ ನಿನ್ನೆ ಸಂಜೆ ಒಂದು ತಂಡದಿಂದ ದಾಳಿ ನಡೆದಿದ್ದು ಗಂಭೀರ ಗಾಯಗೊಂಡು ನಂತರ ಹೈ ಲ್ಯಾಂಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ತಂಡವೊಂದು ನಿನ್ನೆ ಸಂಜೆ ಅಡ್ಯಾರ್ ಸಮೀಪ ಯಾಕೂಬ್ ಮೇಲೆ ದಾಳಿ ನಡೆಸಿದ್ದು ಯಾಕೂಬ್ ರಿಕ್ಷಾದಲ್ಲಿ ಹೈ ಲ್ಯಾಂಡ್ ಆಸ್ಪತ್ರೆಗೆ ತೆರಳಿದ್ದರು.ಅಲ್ಲಿ ಸಾವನ್ನಪ್ಪಿದ್ದಾರೆ.ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಯಾಕೂಬ್ ಅಡ್ಯಾರ್ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ.ದಾಳಿಗೆ ವೈಯಕ್ತಿಕ ಮತ್ತು ರಾಜಕೀಯ ಕಾರಣ ಶಂಕಿಸಲಾಗಿದೆ.

ಕಾಂಗ್ರೆಸ್‌ ಮುಖಂಡರ ಪುತ್ರನ ಮೇಲೆ ಅನುಮಾನವೊದ್ದು ಪ್ರಸ್ತುತ ಆತ ತಲೆಮರೆಸಿಕೊಂಡಿದ್ದಾರೆ.ಅಡ್ಯಾರ್ ಬಿಜೆಪಿ ಬೆಂಬಲಿತ ಸದಸ್ಯ ಯಾಕುಬ್ ಜೊತೆಗೆ ಕ್ಷುಲ್ಲಕ ಕಾರಣಕ್ಕೆ ಈತ   ಜಗಳವಾಡಿದ್ದು, ಇದು  ಕೊಲೆಯಲ್ಲಿ ಅಂತ್ಯ ಕಂಡಿದೆ. ಹಲ್ಲೆಗೈದು ನೆಲಕ್ಕೆ ದೂಡಿ ಹಾಕಿ ಎದೆಗೆ ಒದ್ದ ಪರಿಣಾಮ ಯಾಕೂಬ್ ಸಾವು ಸಂಭವಿಸಿದೆ.

ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಕೆಲವರ ವಿಚಾರಣೆ ನಡೆಸುತ್ತಿದ್ದಾರೆ.ಆರೋಪಿಗಳ ಪತ್ತೆಗಾಗಿ ಬಲೆ ಬಿಸಿದ್ದಾರೆ ಎನ್ನಲಾಗಿದೆ.error: Content is protected !!
Scroll to Top