ಅರುಣಾಚಲ ಪ್ರದೇಶದಲ್ಲಿ 6 ನಾಗಾ ಉಗ್ರರ ಹತ್ಯೆ- ಚೀನದ ಶಸ್ತ್ರಾಸ್ತ್ರಗಳು ವಶ

ತಿರಾಪ್: ಅರುಣಾಚಲ ಪ್ರದೇಶದ ಖೋನ್ಸಾ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಸೇನೆಯು ಭಯೋತ್ಪಾದಕರ ವಿರುದ್ಧ ದೊಡ್ಡ ಕಾರ್ಯಾಚರಣೆ ನಡೆಸಿದೆ. ಇಲ್ಲಿ ತಿರಾಪ್ ಜಿಲ್ಲೆಯಲ್ಲಿ ಸೇನೆಯು 6 ಭಯೋತ್ಪಾದಕರನ್ನು ಹತ್ಯೆಗೈದಿದೆ. ಈ ಎಲ್ಲ ಭಯೋತ್ಪಾದಕರು ನಾಗಾ ಉಗ್ರ ಸಂಘಟನೆಯ (ಎನ್‌ಎಸ್‌ಸಿಎನ್-ಐಎಂ) ಸದಸ್ಯರಾಗಿದ್ದರು.  ಹತ್ಯೆಗೀಡಾದ ಭಯೋತ್ಪಾದಕರಿಂದ ಚೀನದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅರುಣಾಚಲ ಪ್ರದೇಶದ  ಡಿಜಿಪಿ ಆರ್. ಪಿ.ಉಪಾಧ್ಯಾಯ ಶನಿವಾರ ಮುಂಜಾನೆ 4.30 ರ ಸುಮಾರಿಗೆ ಪೊಲೀಸ್ ಮತ್ತು ಅಸ್ಸಾಂ ರೈಫಲ್ಸ್ ಜಂಟಿ ತಂಡ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಇದರಲ್ಲಿ ನಾಗ ಉಗ್ರ ಸಂಘಟನೆಯ ಆರು ಉಗ್ರರು ಹತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಭಯೋತ್ಪಾದಕರೊಂದಿಗಿನ ಮುಖಾಮುಖಿಯಲ್ಲಿ ಅಸ್ಸಾಂ ರೈಫಲ್ಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಈ ಭಯೋತ್ಪಾದಕರಿಂದ 4 ಎಕೆ -47 ಮತ್ತು 2 ಚೀನೀ ಎಂಕ್ಯೂಗಳನ್ನು ವಶಪಡಿಸಿಕೊಳ್ಳಲಾಗಿದೆ, ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದವರು ಮಾಹಿತಿ ನೀಡಿದ್ದಾರೆ.

error: Content is protected !!
Scroll to Top