Homeಧಾರ್ಮಿಕಭಕ್ತರ ಮನೆ ಬಾಗಿಲಿಗೆ ಬರಲಿದೆ ಕಾಶಿಯ ಪ್ರಸಾದ

Related Posts

ಭಕ್ತರ ಮನೆ ಬಾಗಿಲಿಗೆ ಬರಲಿದೆ ಕಾಶಿಯ ಪ್ರಸಾದವಾರಾಣಸಿ : ಕಾಶಿ ವಿಶ್ವನಾಥನ ದರ್ಶನ ಭಾಗ್ಯವಿಲ್ಲವೆಂದು ಯಾರೂ ಕೂಡ ಕೊರಗುವುದು ಬೇಡ, ಪ್ರಸಾದ ಭಕ್ತರ ಮನೆ ಬಾಗಿಲಿಗೆ ಬರಲಿದೆ. ಅಂಚೆ ಇಲಾಖೆ ಮತ್ತು ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಶ್ರಾವಣ ಮಾಸದಲ್ಲಿ ಪ್ರಸಾದವನ್ನು ತಲುಪಿಸಲು ಒಪ್ಪಂದ ಮಾಡಿಕೊಂಡಿದೆ. ‘ಪ್ರಸಾದವನ್ನು ಸ್ಪೀಡ್ ಪೋಸ್ಟ್ ಮೂಲಕ ತಲುಪಿಸಲಾಗುವುದು ಎಂದು ಲಕ್ನೋ ವೃತ್ತದ ಅಂಚೆ ವಿಭಾಗದ ನಿರ್ದೇಶಕ ಕೃಷ್ಣ ಕುಮಾರ್ ಯಾದವ್ ತಿಳಿಸಿದ್ದಾರೆ.
ಪವಿತ್ರ ಶ್ರಾವಣ ಮಾಸದಲ್ಲಿ ಲಕ್ಷಾಂತರ ಶಿವಭಕ್ತರು ಕಾಶಿಯಾತ್ರೆ ಮಾಡಿ ವಿಶ್ವನಾಥನ ದರ್ಶನ ಪಡೆಯಲು ಬಯಸುತ್ತಾರೆ. ಆದರೆ ಈ ಬಾರಿ ದೇಶಾದ್ಯಂತ ಕೊರೊನಾ ಹಾವಳಿ ಇರುವ ಕಾರಣ ಅಂಥ ಯಾತ್ರೆಗೆ ಅವಕಾಶವಿರುವುದಿಲ್ಲ.
ಪವಿತ್ರ ಶ್ರಾವಣ ಮಾಸದಲ್ಲಿ ಲಕ್ಷಾಂತರ ಶಿವಭಕ್ತರು ಕಾಶಿಯಾತ್ರೆ ಮಾಡಿ ವಿಶ್ವನಾಥನ ದರ್ಶನ ಪಡೆಯಲು ಬಯಸುತ್ತಾರೆ. ಆದರೆ ಈ ಬಾರಿ ದೇಶಾದ್ಯಂತ ಕೊರೊನಾ ಹಾವಳಿ ಇರುವ ಕಾರಣ  ಯಾತ್ರೆಗೆ ಅವಕಾಶವಿರುವುದಿಲ್ಲ.
ವಿಶ್ವನಾಥನ ಪ್ರಸಾದಕ್ಕಾಗಿ ಯಾವುದೇ ಅಂಚೆ ಕಚೇರಿಯಿಂದ 251 ರೂ.ಗಳ ಎಲೆಕ್ಟ್ರಾನಿಕ್ ಮನಿ ಆರ್ಡರ್ ಅನ್ನು ವಾರಣಾಸಿ ಪೂರ್ವ ವಿಭಾಗದ ಸೂಪರಿಂಟೆಂಡೆಂಟ್ ಅಂಚೆ ಕಚೇರಿಗಳಿಗೆ ಕಳುಹಿಸಬೇಕು ಮತ್ತು ಮೂರನೇ ದಿನ ಕಾಶಿ ವಿಶ್ವನಾಥ ದೇವಸ್ಥಾನದಿಂದ ‘ಪ್ರಸಾದ’ ವನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾಗುತ್ತದೆ. ಈ ಪಾರ್ಸೆಲ್‌ನಲ್ಲಿ ಕಾಶಿ ವಿಶ್ವನಾಥ ದೇವಾಲಯದ ಜ್ಯೋತಿರ್ಲಿಂಗ, ಮಹಾ ಮೃತುಂಜಯ ಮಹಾ ಯಂತ್ರ, ಶಿವ ಚಾಲೀಸಾ, ರುದ್ರಾಕ್ಷಿ, ಡ್ರೈ ಫ್ರೂಟ್ಸ್, ವಿಭೂತಿ ಮತ್ತು ಒಂದು ಪ್ಯಾಕೆಟ್ ಸಿಹಿತಿಂಡಿ ಹಾಗೂ ದೇವರ ಫೋಟೋಗಳಿರಲಿದೆ ಎಂದು ಯಾದವ್ ಹೇಳಿದ್ದಾರೆ. ಯಾರೂ ನಿರಾಶರಾಗಬೇಕಾಗಿಲ್ಲ. ಭಕ್ತರಿಗೆ ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದರೂ, ಸೋಮವಾರದಿಂದ ಪ್ರಾರಂಭವಾಗುವ ಹಿಂದೂ ಕ್ಯಾಲೆಂಡರ್ ನ ಶ್ರಾವಣ ಮಾಸದಲ್ಲಿ ವಿಶ್ವನಾಥನ ಪ್ರಸಾದವನ್ನು ನಿಮ್ಮ ನಿಮ್ಮ ಮನೆಗೇ ತರಿಸಿಕೊಳ್ಳಬಹುದು. ಇದಕ್ಕಾಗಿ ವಿಶ್ವನಾಥ ದೇವಾಲಯ ಹಾಗೂ ಅಂಚೆ ಇಲಾಖೆ ಒಪ್ಪಂದ ಮಾಡಿಕೊಂಡಿವೆ.


LEAVE A REPLY

Please enter your comment!
Please enter your name here

Latest Posts

error: Content is protected !!