ಪಾಕಿಸ್ತಾನದಲ್ಲಿ ಹೆಸರುಬೇಳೆ ಕೆಜಿಗೆ 260 ರೂ.

ಆರ್ಥಿಕ ವರ್ಷ 2020ರಲ್ಲಿ ಹಲವಾರು ಕಾರಣಗಳಿಂದಾಗಿ ಪಾಕಿಸ್ಥಾನದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಇದು ಶೇಕಡಾ 10.74 ರೊಂದಿಗೆ ಎಂಟು ತಿಂಗಳ ಗರಿಷ್ಠ ಮಟ್ಟದಲ್ಲಿದೆ.

ದಿಲ್ಲಿ : ಪಾಕಿಸ್ಥಾನದಲ್ಲಿ ಹಣದುಬ್ಬರ ಹೆಚ್ಚಾಗಿದ್ದು ಜನಸಾಮಾನ್ಯರು ಜೀವನ ಸಾಗಿಸುವುದೇ ಕಷ್ಟವಾಗಿದೆ.  ತರಕಾರಿಗಳ ನಂತರ ದ್ವಿದಳ ಧಾನ್ಯಗಳ ಬೆಲೆಗಳು ಗಗನಕ್ಕೇರಿವೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಪಾಕಿಸ್ಥಾನದ ರೂಪಾಯಿ ಹೆಚ್ಚು ಕುಸಿದಿದೆ. ಆರ್ಥಿಕ ವರ್ಷ 2020 ರಲ್ಲಿ ಹಲವಾರು ಕಾರಣಗಳಿಂದಾಗಿ ಪಾಕಿಸ್ಥಾನದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಇದು ಶೇಕಡಾ 10.74 ರೊಂದಿಗೆ ಎಂಟು ತಿಂಗಳ ಗರಿಷ್ಠ ಮಟ್ಟದಲ್ಲಿದೆ.

ಪಾಕಿಸ್ಥಾನದ ಬ್ಯೂರ ಆಫ್ ಸ್ಟ್ಯಾಟಿಸ್ಟಿಕ್ ಅನ್ನು ಉಲ್ಲೇಖಿಸಿ, ಸುದ್ದಿ ಸಂಸ್ಥೆ ಕ್ಸಿನುವಾ ವಿವಿಧ ಸರಕು ಮತ್ತು ಸೇವೆಗಳ ಬೆಲೆ ಚಿಲ್ಲರೆ ಹಣದುಬ್ಬರ ದರವನ್ನು ಗಮನಾರ್ಹವಾಗಿ ಹೆಚ್ಚಿಸಿದೆ ಎಂದು ವರದಿಮಾಡಿದೆ. ಶಿಕ್ಷಣ, ಮನೆ ಬಾಡಿಗೆ ಮತ್ತು ಯುಟಿಲಿಟಿ ಬಿಲ್‌ಗಳು ಮತ್ತು ಆಹಾರ ಮತ್ತು ಪಾನೀಯಗಳ ಬೆಲೆಗಳು ಏರಿಕೆಯಾಗಿವೆ. 2020 ರ ಆರಂಭದಿಂದ ಪಾಕಿಸ್ಥಾನದಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆ ಸಮಯದಲ್ಲಿ ಪಾಕಿಸ್ಥಾನ ಸರ್ಕಾರವು ಅನಿಲ ಮತ್ತು ವಿದ್ಯುತ್ ದರದಲ್ಲಿ ಭಾರಿ ಹೆಚ್ಚಳ ಮಾಡಿತ್ತು. ವಾಸ್ತವವಾಗಿ ಪಾಕಿಸ್ಥಾನ ಸರ್ಕಾರ ಐಎಂಎಫ್ ನಿಂದ ಬೇಲ್ ಔಟ್ ಪ್ಯಾಕೇಜ್‌ ಗಾಗಿ ಕಾಯುತ್ತಿದೆ. ಹಣಕಾಸಿನ ನಷ್ಟವನ್ನು ಕಡಿಮೆ ಮಾಡಲು ಈ ಬೇಲ್‌ ಔಟ್ ಪ್ಯಾಕೇಜ್ ಬಹಳ ಮುಖ್ಯ.

ಅತಿ ಹೆಚ್ಚು ಹಣದುಬ್ಬರ
ಪಾಕಿಸ್ಥಾನ ಸ್ಟೇಟ್ ಬ್ಯಾಂಕ್ (ಎಸ್‌ಬಿಪಿ) 2020 ರ ಆರ್ಥಿಕ ವರ್ಷದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಹಣದುಬ್ಬರವನ್ನು ಕಂಡಿದ್ದ. ಇದರಿಂದ  ಬಡ್ಡಿದರವನ್ನು ಹೆಚ್ಚಳವಾಗಿದೆ. ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ ಮಾತ್ರವಲ್ಲದೆ ಭಾರತ, ಚೀನಾ, ಬಾಂಗ್ಲಾದೇಶ ಮತ್ತು ನೇಪಾಳದಂತಹ ಉದಯೋನ್ಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಪಾಕಿಸ್ಥಾನ ಅತಿದೊಡ್ಡ ಹಣದುಬ್ಬರವನ್ನು ದಾಖಲಿಸಿದೆ.

ದ್ವಿದಳ ಧಾನ್ಯಗಳ ಬೆಲೆ ಹೆಚ್ಚಳ 
ಚಿಲ್ಲರೆ ಮಾರುಕಟ್ಟೆಯಲ್ಲಿ ಹೆಸರುಬೇಳೆ ಅನ್ನು ಪ್ರತಿ ಕೆ.ಜಿ.ಗೆ 220-260 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದೇ ಸಮಯದಲ್ಲಿ ತೊಗರಿ ಬೇಳೆ ಬೆಲೆ ಕೆ.ಜಿ.ಗೆ 160 ರೂ.ಗೆ ಏರಿದೆ. ಇದಲ್ಲದೆ ಸಕ್ಕರೆಯ ಬೆಲೆ 75 ರೂಪಾಯಿಗಳನ್ನು ಮೀರಿದೆ. ಪಾಕಿಸ್ಥಾನ ಪಿಬಿಎಸ್ ಪ್ರಕಾರ, ಹಣದುಬ್ಬರ ದರವು ದಾಖಲೆಯ ಮಟ್ಟವನ್ನು ತಲುಪಿದೆ.

ರೂಪಾಯಿ ಮೌಲ್ಯ ಪಾತಾಳಕ್ಕೆ

ಪಾಕಿಸ್ಥಾನದ ರೂಪಾಯಿ ಮೌಲ್ಯದಲ್ಲೂ ಕುಸಿತ ಕಂಡು ಬಂದಿದೆ. ಈ ವರ್ಷ ಪಾಕಿಸ್ಥಾನದ ರೂಪಾಯಿ ಮೌಲ್ಯ ಇದುವರೆಗೆ ಶೇ. 25 ರಷ್ಟು ಕುಸಿದಿದೆ. ಇದರಿಂದಾಗಿ ಹಣದುಬ್ಬರದ ಕೆಟ್ಟ ಸ್ಥಿತಿ ಇದೆ. ಕಳೆದ ತಿಂಗಳು ಕೂಡ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ಥಾನವು ಹಣದುಬ್ಬರ ಹಲವು ವರ್ಷಗಳ ಉತ್ತುಂಗದಲ್ಲಿದೆ ಎಂದು ವರದಿಯಲ್ಲಿ ತಿಳಿಸಿತ್ತು. ಜನವರಿಯಲ್ಲಿ ಹಣದುಬ್ಬರ ಶೇ 14.6 ತಲುಪಿದೆ. ಆದಾಗ್ಯೂ ಪೆಟ್ರೋಲಿಯಂ ಉತ್ಪನ್ನಗಳ ಕಡಿತ ಮತ್ತು ಬಡ್ಡಿದರಗಳಿಂದ ಇದು ಸ್ವಲ್ಪ ಕಡಿಮೆಯಾಗಿದೆ. ಈ ಹಿಂದೆ ಆರ್ಥಿಕ ವರ್ಷ 2012 ರಲ್ಲಿ ವಿವಿಧ ಕಾರಣಗಳಿಂದಾಗಿ ಹಣದುಬ್ಬರವು  ಶೇಕಡಾ 11.0 ಕ್ಕೆ ತಲುಪಿತ್ತು.

error: Content is protected !!
Scroll to Top