ಕಾರ್ಕಳ : ಬಿದ್ದು ಗಾಯಗೊಂಡಿದ್ದ ನಿವೃತ್ತ ಎಎಸ್‌ಐ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಂದಳಿಕೆ ಗ್ರಾಮದಲ್ಲಿ ನಡೆದಿದೆ. ಪಿ. ಗಂಗಾಧರ (54) ಮೃತ ದುರ್ದೈವಿ. ಶಿರ್ವ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಸ್ವಯಂ ನಿವೃತ್ತಿಗೊಂಡಿದ್ದರು. ಮಾ. 11ರಂದು ಸಂಜೆ
ಮನೆಯ ಅಂಗಳದಲ್ಲಿ ಬಿದ್ದು, ತಲೆಗೆ ಗಾಯಗೊಂಡಿತ್ತು. ಮಂಗಳೂರು ಕೆ.ಎಂ.ಸಿ. ಹಾಗೂ ಉಡುಪಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜು. 1 ರಂದು ಡಿಸ್ಚಾರ್ಜ್ ಆಗಿದ್ದರು. ಆ. 7ರಂದು ತೀವ್ರ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ಕಾರ್ಕಳ ಟಿ.ಎಂ.ಎ. ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಬಿದ್ದು ಗಾಯಗೊಂಡಿದ್ದ ನಿವೃತ್ತ ಎಎಸ್‌ಐ ಚಿಕಿತ್ಸೆ ಫಲಿಸದೆ ಮೃತ
























