ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆ – ಶಾಲಾ ಸಂಸತ್ತಿನ ಪದಗ್ರಹಣ

ಕಾರ್ಕಳ : ಜ್ಞಾನಸುಧಾಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆ ಗಣಿತ ನಗರದಲ್ಲಿ 2026-27ನೇ ಸಾಲಿನ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭ ಜೂ. 25ರಂದು ನಡೆಯಿತು.
ಕಾರ್ಕಳ ಡಿವೈಎಸ್‌ಪಿ ಎಸ್. ವಿಜಯ ಪ್ರಸಾದ್‌ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವಿದ್ಯೆ ಎಂದರೆ ತಪಸ್ಸು ಇದ್ದ ಹಾಗೆ. ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು. ಆದ್ದರಿಂದ ವಿದ್ಯಾರ್ಥಿಗಳು ಕಾನೂನು, ನಿಯಮ, ಸಂಪ್ರದಾಯಗಳನ್ನು ಅಳವಡಿಸಿಕೊಂಡು ಶಿಸ್ತು ಬದ್ಧರಾಗಿರಬೇಕು ಎಂದ ಅವರು ದೇಶಾದ್ಯಂತ ಹೆಸರು ಮಾಡುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶಗಳನ್ನು ನೀಡುತ್ತಿದ್ದು, ಅದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದೇ ಸಂದರ್ಭ ನಡೆದ ನಶಾ ಮುಕ್ತ ಭಾರತ ಮತ್ತು ಸೈಬರ್‌ ಕ್ರೈಮ್‌ ಮಾಹಿತಿ ಕಾರ್ಯಕ್ರಮದಲ್ಲಿ ಕಾರ್ಕಳ ನಗರ ಪೊಲೀಸ್‌ ಠಾಣೆಯ ಸಬ್‌ಇನ್ಸ್ಪೆಕ್ಟರ್ ಶಿವಕುಮಾರ್ ಮಾತನಾಡಿ, ಮದ್ಯಪಾನ, ತಂಬಾಕು ಹಾಗೂ ಇತರ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳು ನಶೆಯಿಂದ ದೂರವಿದ್ದು, ತಮ್ಮ ಕುಟುಂಬ ಹಾಗೂ ಸಮಾಜದಲ್ಲಿಯೂ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.

ಶಾಲಾ ಸಂಸತ್ತಿನ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ಉಪಪ್ರಾಂಶುಪಾಲೆ ವಾಣಿ ಕೆ. ಪ್ರಮಾಣ ವಚನ ಬೋಧಿಸಿದರು. ಕಾರ್ಕಳ ಜ್ಞಾನಸುಧಾ ಕಾಲೇಜಿನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು, ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಮಹಿಳಾ ಪ್ರೊಬೇಷನರಿ ಸಬ್‌ಇನ್ಸ್ಪೆಕ್ಟರ್‌ ಸೀಮಾ ಅಂಜು, ಶಾಲಾ ನಾಯಕ ಪ್ರದ್ಯೋತ್‌ ಪ್ರಮಲ್, ಉಪ ನಾಯಕಿ ಸಿನಿ ಶೆಟ್ಟಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಸಾಹಿತ್ಯ, ಡೀನ್ ಸ್ಟೂಡೆಂಟ್ಸ್ ಅಫೈರ್ ಶಕುಂತಳಾ ಎಂ. ಸುವರ್ಣ ಉಪಸ್ಥಿತರಿದ್ದರು.

ಶಾಲಾ ಸಂಸತ್ತಿಗೆ ರಿತ್ವಿಕ್ ಶೆಟ್ಟಿ, ಧ್ರುವಿತಾ ಜಿ. ಡಿ., ವರ್ಣ ಭಟ್, ಅನ್ಶಿ ಪ್ರಸಾದ್ ಸುವರ್ಣ, ಅನ್ವಿ ಶೆಟ್ಟಿ, ಶಾರ್ವಿ ಹೆಗ್ಡೆ, ಅನ್ವಿತ್ ಶೆಟ್ಟಿ, ಪಾಯಲ್‌ಗೌಡ, ಅಹನ್ ಬಲ್ಲಾಳ್, ಅದೃಷ್ಟ್ ವೈ ಶೆಟ್ಟಿ, ಸುಹಾನಿ ಕುಡ್ವ, ಶ್ರೇಯಾ, ಶ್ಲೋಕ ಸಂದೇಶ್ ಶೆಟ್ಟಿ, ಅವನಿ ಪೈ, ಇಶಾ ಪಿ. ಶೆಟ್ಟಿ, ಕಾರ್ತಿಕ್ ಶೆಟ್ಟಿಗಾರ್‌ ಆಯ್ಕೆಗೊಂಡರು. ವಿದ್ಯಾರ್ಥಿನಿಯರಾದ ಶ್ರೀಮಾ ಪ್ರಭು ಮತ್ತು ಶ್ರೀಯಾ ಪ್ರಭು ಸ್ವಾಗತ ನೃತ್ಯ ಮಾಡಿದರು. ವಿ. ತನುಜ್ಞಾ ಪ್ರಾರ್ಥಿಸಿದರು. ತೀರ್ಥ್ ಶೆಟ್ಟಿ ಸ್ವಾಗತಿಸಿದರು. ಯಶ್ವಿ ಬಿ. ಎಚ್‌. ಕಾರ್ಯಕ್ರಮ ನಿರೂಪಿಸಿ, ಆಯಿಶಾ ನಿಫಾ ವಂದಿಸಿದರು.































error: Content is protected !!
Scroll to Top