ಕಾರ್ಕಳ : ಪಾದಚಾರಿಗೆ ಬೈಕ್ ಡಿಕ್ಕಿಯಾದ ಕುರಿತಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ. 25ರಂದು ಕುಕ್ಕುಂದೂರು ಗ್ರಾಮದ ಜೊಡುರಸ್ತೆಯ ರಂಜನ್ ಕುಮಾರ್ ಅವರು ತಮ್ಮೊಂದಿಗೆ ಕೆಲಸ ಮಾಡುವ ರಂಜಿತ್ ಕುಮಾರ್ ಮತ್ತು ರೋಹನ್ ಅವರೊಂದಿಗೆ ರಾತ್ರಿ ಜೋಡುರಸ್ತೆಯ ಜಿಮ್ ತರಗತಿಯಲ್ಲಿ ಅಭ್ಯಾಸ ಮುಗಿಸಿ ವಾಪಾಸು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಕ್ಕುಂದೂರು ಕುಲಾಲ ಭವನದ ಬಳಿ ಆಪಾದಿತ ಬಜಾಜ್ ಡಿಸ್ಕವರ್ ಬೈಕ್ ಸವಾರ ಸಂದೇಶ್ ಎಂಬವರು ತಮ್ಮ ಬೈಕ್‌ನ್ನು ಹಿಂದುಗಡೆಯಿಂದ ಜೋಡುರಸ್ತೆ ಕಡೆಯಿಂದ ಅಯ್ಯಪ್ಪ ನಗರ ಕಡೆಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಂಜಿತ್ ಕುಮಾರ್ ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮವಾಗಿ ರಂಜಿತ್ ಕುಮಾರ್ ಗಾಯಗೊಂಡಿರುತ್ತಾರೆ. ಈ ಅಪಘಾತಕ್ಕೆ ಬಜಾಜ್ ಡಿಸ್ಕವರ್ ಬೈಕ್ ಸವಾರನ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿ ಪ್ರಕರಣ ದಾಖಲಾಗಿರುತ್ತದೆ.
ಪಾದಚಾರಿಗೆ ಬೈಕ್ ಡಿಕ್ಕಿ – ದೂರು ದಾಖಲು



























