ಬಜಗೋಳಿಯಲ್ಲಿ ಸ್ವಚ್ಛತಾ ಕಾರ್ಯ

ಕಾರ್ಕಳ : ಸ್ವಚ್ಛ ಬಜಗೋಳಿ ಬ್ರಿಗೇಡ್, ಅಬ್ಬೆಂಜಾಲ್ ಫ್ರೆಂಡ್ಸ್ ಕ್ಲಬ್ ಮತ್ತು ಗಾಂಧಿನಗರ ಫ್ರೆಂಡ್ಸ್ ನಲ್ಲೂರು ಸಹಭಾಗಿತ್ವದಲ್ಲಿ ಬಜಗೋಳಿ ಪ್ರಾಥಮಿಕ ಶಾಲೆಯಿಂದ ನಲ್ಲೂರು ಕ್ರಾಸ್‌ವರೆಗೆ ರಸ್ತೆ ಬದಿಗಳಲ್ಲಿ ಹಾಗೂ ಬಸ್‌ ನಿಲ್ದಾಣಗಳ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಯಿತು.
80 ಚೀಲಕ್ಕೂ ಅಧಿಕ ಪ್ಲಾಸ್ಟಿಕ್ ತಾಜ್ಯ ವಸ್ತುಗಳು ಹಾಗೂ 15 ಚೀಲಕ್ಕೂ ಹೆಚ್ಚು ಬಾಟಲಿಗಳು (ಸುಮಾರು 600ಕೆಜಿ) ದೊರೆತಿದ್ದು, ಇದನ್ನು ವಿಲೇವಾರಿಗಾಗಿ ನಲ್ಲೂರು SLRM ಘಟಕಕ್ಕೆ ನೀಡಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಸುಮಾರು 45 ಮಂದಿ ಭಾಗವಹಿಸಿದ್ದರು.































error: Content is protected !!
Scroll to Top