ಕೇರಳ ಸ್ಟೇಟ್ ಅಟಾರ್ನಿ ನ್ಯಾಯವಾದಿ ಅನೂಪ್ ನಾಯರ್ ದಿ.ಎಂ.ಕೆ. ವಿಜಯ್ ಕುಮಾರ್ ಮನೆಗೆ ಭೇಟಿ

ಕಾರ್ಕಳ : ಕೇರಳ ರಾಜ್ಯದ ನೂತನ ಸ್ಟೇಟ್ ಅಟಾರ್ನಿ ನ್ಯಾಯವಾದಿ ಅನೂಪ್ ನಾಯರ್ ಅವರು ಜೂ. 25ರಂದು ತಮ್ಮ ಗುರುಗಳಾದ ಕಾರ್ಕಳದ ಹಿರಿಯ ನ್ಯಾಯವಾದಿ ದಿ. ಎಂ. ಕೆ. ವಿಜಯ್ ಕುಮಾರ್ ಅವರ ಮನೆಗೆ ಭೇಟಿ ನೀಡಿದರು.
ವಿಜಯ್‌ ಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನ್ಯಾಯಾಂಗ ಕ್ಷೇತ್ರದಲ್ಲಿ ಎಂ. ಕೆ. ವಿಜಯ್ ಕುಮಾರ್ ಅವರ ಆರು ದಶಕಗಳ ಅವಧಿಯ ಸುಧೀರ್ಘ ಸೇವೆಯನ್ನು ಅನೂಪ್‌ ನಾಯರ್‌ ಸ್ಮರಿಸಿದರು.

ನ್ಯಾಯಾಂಗ ಕ್ಷೇತ್ರದ ದಂತಕಥೆ
ತನ್ನನ್ನು ಸೇರಿ ನೂರಾರು ವಕೀಲ ಶಿಷ್ಯರಿಗೆ ಮಾರ್ಗದರ್ಶನ ಮಾಡಿ ಸಮರ್ಥ ನ್ಯಾಯವಾದಿಗಳಾಗಿ ರೂಪಿಸುವಲ್ಲಿ ಎಂ. ಕೆ. ವಿಜಯ್ ಕುಮಾರ್ ಅವರ ಕೊಡುಗೆ ಅನನ್ಯ. ಅವರ ಅಪಾರ ವಿದ್ವತ್, ಕೌಶಲ್ಯ, ನಿಷ್ಠೆ ಹಾಗೂ ಪ್ರಾಮಾಣಿಕ ಸೇವೆ ಅನುಕರಣೀಯ. ಅವರು ನ್ಯಾಯಾಂಗ ಕ್ಷೇತ್ರದ ದಂತಕಥೆ ಎಂದು ಅನೂಪ್‌ ನಾಯರ್‌ ಹೇಳಿದರು.

ಇತ್ತೀಚಿಗೆ ಕೇರಳ ರಾಜ್ಯದ ಮುಖ್ಯಮಂತ್ರಿ ವಿ.ಡಿ. ಸತೀಸನ್ ಅವರು ನ್ಯಾಯವಾದಿ ಅನೂಪ್ ನಾಯರ್ ಅವರನ್ನು ಕೇರಳ ರಾಜ್ಯದ ಸ್ಟೇಟ್ ಅಟಾರ್ನಿಯಾಗಿ ನೇಮಕ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಗುರುಗಳಾದ ಎಂ.ಕೆ. ವಿಜಯಕುಮಾರ್ ಅವರಿಗೆ ತಮ್ಮ ಶ್ರದ್ಧಾ ನಮನವನ್ನು ಅರ್ಪಿಸಲು ಇಂದು ಅವರು ಕಾರ್ಕಳಕ್ಕೆ ಆಗಮಿಸಿದ್ದರು.

ಈ ಸಂದರ್ಭ ಎಂ.ಕೆ. ವಿಜಯ್ ಕುಮಾರ್ ರವರ ಪುತ್ರರಾದ ನ್ಯಾಯವಾದಿ ಎಂ. ಕೆ. ಸುವ್ರತ್ ಕುಮಾರ್, ಎಂ. ಕೆ. ವಿಪುಲ್ ತೇಜ್, ಶ್ವೇತ ವಿಪುಲ್ ತೇಜ್, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಹರೀಶ್ ಅತಿಕಾರಿ, ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್, ಹಿರಿಯ ನ್ಯಾಯವಾದಿ ಜಿ. ಮುರಳೀಧರ ಭಟ್, ನ್ಯಾಯವಾದಿ ಪರಿತೋಷ್ ಜೈನ್, ಕೇರಳ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪಿ. ಬಿ. ಸುಬ್ರಮಣ್ಯಂ, ಆರ್. ಶ್ರೀಹರಿ, ಶ್ರೀಕಾಂತ್ ಜೈನ್, ಚಂದ್ರರಾಜ ಹೆಗ್ಡೆ, ಪ್ರಕಾಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.































error: Content is protected !!
Scroll to Top