ಮರ್ಣೆ : ಮಹಿಳೆಯರಿಗೆ ಸ್ವ-ಉದ್ಯೋಗ ತರಬೇತಿ

ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂಡ್‌ಶೆಡ್ ಸಂಸ್ಥೆ ಹಾಗೂ ಕೆನರಾ ಬ್ಯಾಂಕ್‌ ಸಹಯೋಗದಲ್ಲಿ ಜೂ. 23ರಂದು ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಜೆಕಾರು ಸಭಾಭವನದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಗಾಗಿ ಉಚಿತವಾಗಿ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.

18 ರಿಂದ 50 ವರ್ಷದ ಮಹಿಳೆಯರಿಗಾಗಿ ಆಯೋಜಿಸಲಾದ 14 ದಿನಗಳ ಈ ತರಬೇತಿಯಲ್ಲಿ ಕೃತಕ ಆಭರಣಗಳ ತಯಾರಿಕೆ, ಸೌಂದರ್ಯವರ್ಧಕ ಸೇವೆಗಳು, ಕೇಶ ವಿನ್ಯಾಸ, ಕೇಶಾಲಂಕಾರ, ಸೀರೆ ಉಡಿಸುವ ಕಲೆ ಸೇರಿದಂತೆ ವಿವಿಧ ಸ್ವ-ಉದ್ಯೋಗ ಕೌಶಲ್ಯಗಳ ಬಗ್ಗೆ ಸಮಗ್ರ ತರಬೇತಿ ನೀಡಲಾಯಿತು. ತರಬೇತಿಯಲ್ಲಿ ಸುಮಾರು 35 ಮಂದಿ ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದರು.































error: Content is protected !!
Scroll to Top