ಶೋಭಾ ಭಾಸ್ಕರ್ ಅವರಿಗೆ ಸಮಾಜ ಸೇವಾಸಿರಿ ಪ್ರಶಸ್ತಿ

ಕಾರ್ಕಳ : ಸಂಪಾಜೆ ರಂಗ ಸಂಗಮ ಬೆಂಗಳೂರು ಕೊಡಮಾಡುವ ಸಮಾಜ ಸೇವಾಸಿರಿ ಪ್ರಶಸ್ತಿಗೆ ಕಾರ್ಕಳ ಗುಂಡ್ಯಡ್ಕದ ಶೋಭಾ ಭಾಸ್ಕರ್‌ ಭಾಜನರಾಗಿದ್ದಾರೆ. ಶೋಭಾ ಅವರು ಸಲ್ಲಿಸಿರುವ ಜನೋಪಯೋಗಿ, ಸಮಾಜಮುಖಿ ಕಾರ್ಯ, ಶಿಕ್ಷಣ, ಸಂಸ್ಕೃತಿ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಪ್ರಶಸ್ತಿ ನೀಡಲಾಗಿದೆ.

ಪಡಿ ಸಂಸ್ಥೆಯ ಶಿಕ್ಷಣ ಸಂಪನ್ಮೂಲ ಕೇಂದ್ರದ ತರಬೇತಿದಾರರಾಗಿರುವ ಇವರು ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ, ಉಡುಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ, ಜೆಸಿಐ ಕಾರ್ಕಳ ರೂರಲ್‌ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಕಾರ್ಯದರ್ಶಿಯಾಗಿದ್ದಾರೆ.





























error: Content is protected !!
Scroll to Top