ಡೆನ್ನಾನ ಕಲಾವಿದರು ಕಾರ್ಕಳ ತಂಡದ ಹೊಸ ನಾಟಕ ʼಗೆಜ್ಜೆʼ ಪೋಸ್ಟರ್ ಬಿಡುಗಡೆ

ಕಾರ್ಕಳ : ಡೆನ್ನಾನ, ಬ್ಯಾಂಡ್ ವಾದ್ಯ, ನಾಟಕ ಎಡ್ಡೆಂಡು ಹೀಗೆ ಉತ್ತಮ ಸಂದೇಶ ಹೊಂದಿರುವ ವಿವಿಧ ಸಮಾಜಮುಖಿ ನಾಟಕಗಳನ್ನು ನೀಡುತ್ತಾ ಬಂದಿರುವ ಸುಭಾಸ್ ಜೈನ್ ನಲ್ಲೂರು ಸಾರಥ್ಯದ ಡೆನ್ನಾನ ಕಲಾವಿದರು ಕಾರ್ಕಳ ತಂಡದ ಹೊಸ ನಾಟಕದ ಶೀರ್ಷಿಕೆ ʼಗೆಜ್ಜೆʼ ಅನಾವರಣ ಕಾರ್ಯಕ್ರಮ ಜೂ. 15ರಂದು ನಡೆಯಿತು. ಕಾರ್ಕಳದ ಶ್ರೀ ಬಾಲಾಜಿ ಮೊಬೈಲ್ಸ್ ಮಾಲಕ ಪ್ರಶಾಂತ್ ಶೆಣೈ ಮತ್ತವರ ಪತ್ನಿ ವೈಷ್ಣವಿ ಶೆಣೈ ಅವರು ಪೋಸ್ಟರ್‌ ಬಿಡುಗಡೆಗೊಳಿಸಿದರು. ಈ ಸಂದರ್ಭ ತಂಡದ ಸದಸ್ಯರಾದ ಜಗನ್ನಾಥ ಶೆಟ್ಟಿ ಕುಡ್ಲ, ಶರತ್ ಶೆಟ್ಟಿ ಬೋಳ, ಅಭಿಲಾಶ್, ರಕ್ಷಿತ್, ರಾಜೇಶ್ ಪೈ, ಮಂಜು ಹಾಗೂ ಬಾಲಾಜಿ ಮೊಬೈಲ್ಸ್ ಸಿಬ್ಬಂದಿ ಉಪಸ್ಥಿತರಿದ್ದರು. ಪರಪ್ಪಾಡಿ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.































error: Content is protected !!
Scroll to Top