ಗಂಡ ಹೆಂಡತಿ ಜಗಳ – ಪತ್ನಿಗೆ ಕತ್ತಿಯಿಂದ ಹಲ್ಲೆ

ಕಾರ್ಕಳ : ಪತ್ನಿಗೆ ಪತಿ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಜೂ. 15ರಂದು ನಿಟ್ಟೆ ಗ್ರಾಮದಲ್ಲಿ ನಡೆದಿದೆ. ಬೇಬಿ ಹಲ್ಲೆಗೊಳಗಾದವರು. ಇವರ ಗಂಡ ಧರ್ಮ ಪ್ರತಿನಿತ್ಯ ಬೇಬಿಯವರೊಂದಿಗೆ ಜಗಳವಾಡುತ್ತಿದ್ದು, ಸೋಮವಾರ ಸಂಜೆ ಜಗಳವಾಡುತ್ತಿರುವಾಗ ಕತ್ತಿಯಿಂದ ಕುತ್ತಿಗೆಯ ಮೇಲೆ ಕಡಿದಿದ್ದಾರೆ. ಗಾಯಾಳು ಬೇಬಿರವರನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಗಳು ವಿಶಾಲಾಕ್ಷಿ ನೀಡಿದ ಮಾಹಿತಿಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.































error: Content is protected !!
Scroll to Top