ತೆಳ್ಳಾರು ಪ್ರೌಢಶಾಲೆಯಲ್ಲಿ ಪ್ರಾರಂಭೋತ್ಸವ- ಕೊಡುಗೆಗಳ ಹಸ್ತಾಂತರ – ಸಾಧಕರಿಗೆ ಸನ್ಮಾನ

ಕಾರ್ಕಳ : ದುರ್ಗಾ ತೆಳ್ಲಾರು ಶ್ರೀ ಬಿ. ಮಂಜುನಾಥ ಪೈ ಸ್ಮಾರಕ‌ ಸರಕಾರಿ ಪ್ರೌಢಶಾಲೆಯಲ್ಲಿ ಜೂ. 1ರಂದು ಶಾಲಾ‌ ಪ್ರಾರಂಭೋತ್ಸವ, ಕೊಡುಗೆಗಳ ಹಸ್ತಾಂತರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ದಿ‌ ಸಮಿತಿ ಅಧ್ಯಕ್ಷ ಆದರ್ಶ್ ಇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

8ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳನ್ನು ಪೋಷಕರ ಜೊತೆಗೆ ಶಾಲೆಗೆ ಸ್ವಾಗತಿಸಲಾಯಿತು. 2025-26ನೇ SSLC ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದ ಪ್ರಯುಕ್ತ ಶಾಲಾ ಶಿಕ್ಷಕರು ಹಾಗು ವಿದ್ಯಾರ್ಥಿಗಳನ್ನು ಶಾಲಾಭಿವೃದ್ದಿ‌ ಸಮಿತಿ ಅಧ್ಯಕ್ಷ ಆದರ್ಶ್ ಇಂದ್ರ ವೈಯಕ್ತಿಕವಾಗಿ ಅಭಿನಂದಿಸಿ ಸನ್ಮಾನಿಸಿದರು. ಶಾಲೆಯ SDMCಯು 2025-26ನೇ ಸಾಲಿನಲ್ಲಿ ಉತ್ತಮ SDMC ಪ್ರಶಸ್ತಿಗೆ ಆಯ್ಕೆಯಾದ ಹಿನ್ನಲೆಯಲ್ಲಿ ಶಾಲಾ ಶಿಕ್ಷಕರು ಎಲ್ಲಾ SDMC ಸದಸ್ಯರನ್ನು ಅಭಿನಂದಿಸಿದರು.

ಶಾಲಾ ದಾನಿಗಳಾದ ಭಾರತ್ ಬೀಡಿ ಪ್ರೈವೇಟ್ ಲಿಮಿಟೆಡ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸುಬ್ರಾಯ ಎಂ. ಪೈ ಅವರು ಶಾಲೆಗೆ ಕೊಡುಗೆಯಾಗಿ ನೀಡಿದ 5 ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಲಾಯಿತು. ನಿವೃತ್ತ ಲೆಕ್ಕಪರಿಶೋಧಕ ಕೆ. ಕಮಲಾಕ್ಷ ಕಾಮತ್ ಅವರು ಕಂಪ್ಯೂಟರ್ ತರಗತಿಗೆ ಬೇಕಾದ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದ್ದು, ನೂತನ ಕಂಪ್ಯೂಟರ್ ತರಗತಿಯನ್ನು ಭಾರತ್ ಬೀಡಿ ಪ್ರೈವೇಟ್‌ ಲಿಮಿಟೆಡ್ ಕಾರ್ಕಳ ಇದರ ಮ್ಯಾನೇಜರ್ ಶ್ರೀನಿವಾಸ್ ಆಚಾರ್ಯ ಉದ್ಘಾಟಿಸಿದರು.

ದಾನಿಗಳ ನೆರವಿನಿಂದ SSLC ಸಾಧಕ ವಿದ್ಯಾರ್ಥಿಗಳಿಗೆ ನಗದು ರೂಪದ‌ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳಿಗೆ ಕೊಡೆ, ನೋಟ್ ಬುಕ್ ಹಾಗು ಕ್ರೀಡಾ ಸಮವಸ್ತ್ರಗಳನ್ನು ಇದೇ ಸಂಧರ್ಭದಲ್ಲಿ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ‌ ಮುಖ್ಯ ಅತಿಥಿಗಳಾಗಿ ಕಮಲಾಕ್ಷ ಕಾಮತ್, ನಿವೃತ್ತ ಶಿಕ್ಷಕಿ ಸಾವಿತ್ರಿ ಮನೋಹರ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅರುಣ್ ಮಾಂಜ ಅರುಣ್ ಮಾಂಜ, ದೇವಕಿ, ಗಣಪಯ್ಯ, ಕೆ.ಕೃಷ್ಣ, ದಿನೇಶ್ ನಾಯ್ಕ್ ಉಪಸ್ಥಿತರಿದ್ದರು. ಶಾಲಾ ‌ಮುಖ್ಯ ಶಿಕ್ಷಕಿ ಸ್ಮಿತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಶಿಕ್ಷಕರಾದ ನ್ಯಾನ್ಸಿ ಸ್ವಾಗತಿಸಿ, ರಾಘವೇಂದ್ರ ವಂದಿಸಿದರು. ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು.







































































error: Content is protected !!
Scroll to Top