ಕೆರ್ವಾಶೆಯಲ್ಲಿ ವಕ್ರಾಂಗಿ UPI ATM ಕೇಂದ್ರ ಶುಭಾರಂಭ

ಕಾರ್ಕಳ : ಅತ್ಯುತ್ತಮ ಸೇವೆಗೆ ಹೆಸರುವಾಸಿಯಾಗಿರುವ ರಿಸರ್ವ್ ಬ್ಯಾಂಕ್‌ನಿಂದ ಮಾನ್ಯತೆ ಪಡೆದ ಮುಂಬೈ ಮೂಲದ ವಕ್ರಾಂಗಿ ಸಂಸ್ಥೆಯ ವಿನೂತನ ತಂತ್ರಜ್ಞಾನಗಳನ್ನೊಳಗೊಂಡ UPI MINI ATM ಕೇಂದ್ರವು ಶ್ರೀ ಪದ್ಮ ಡೆವಲಪರ್ಸ್‌ನ ಅಭಿನಂದನ್ ಜೈನ್ ಅವರ ಮಾಲಕತ್ವದಲ್ಲಿ ಸಾರ್ವಜನಿಕ ಸೇವೆಗಾಗಿ ಕೆರ್ವಾಶೆ ಗರಡಿ ಬಳಿಯ ಸಾಗರ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ.

ಕೆರ್ವಾಶೆ ವ್ಯಾಪ್ತಿಯಲ್ಲಿ ಪ್ರಪಥಮ ATM ಕೇಂದ್ರವು ಇದಾಗಿದ್ದು ನೂತನ ATM ಕೇಂದ್ರದಲ್ಲಿ ಎಲ್ಲಾ ಬ್ಯಾಂಕಿನ ಕಾರ್ಡುಗಳ ಮೂಲಕ ನಗದನ್ನು ಪಡೆಯಬಹುದಾದ ವ್ಯವಸ್ಥೆಯ ಜೊತೆಗೆ ಅತ್ಯಂತ ಸರಳ ರೀತಿಯಲ್ಲಿ ತಮ್ಮ ಮೊಬೈಲ್‌ನಿಂದ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಸ್ಕ್ಯಾನರ್ ಬಳಸಿ ನಗದನ್ನು ಪಡೆಯುವ ವ್ಯವಸ್ಥೆಯು ಇರಲಿದ್ದು ನೂತನ ಸುಸಜ್ಜಿತ ಕೇಂದ್ರವು ಸಾರ್ವಜನಿಕ ಸೇವೆಗೆ ದಿನದ 24 ಗಂಟೆಯೂ ತೆರೆದಿರುತ್ತದೆ.







































































error: Content is protected !!
Scroll to Top