ಕೌಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನವೀಕರಣ – ವಿಜ್ಞಾಪನೆ ಬಿಡುಗಡೆ

ಕಾರ್ಕಳ : 700 ವರ್ಷಗಳ ಇತಿಹಾಸ ಹೊಂದಿರುವ ಅಪರೂಪದ ಖರಾಸುರ ಪ್ರತಿಷ್ಠಾ ಶೈಲಿಯಲ್ಲಿ ನಿರ್ಮಿತವಾಗಿರುವ ಕೌಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನವೀಕರಣ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಫೆ. 12ರಂದು ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು. ಶಿಲಾಮಯ ಗರ್ಭಗೃಹ, ತೀರ್ಥ ಮಂಟಪ, ಸುತ್ತುಪೌಳಿ ನಿರ್ಮಾಣದೊಂದಿಗೆ ದೇವಸ್ಥಾನ ನವೀಕರಣಗೊಳ್ಳಲಿದ್ದು ದೇವಸ್ಥಾನ ಜೀರ್ಣೋದ್ಧಾರ ಸಮಿತಿಯು ದೇಣಿಗೆ ಸಂಗ್ರಹಕ್ಕೆ ಮುಂದಾಗಿದೆ.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಮಾಡ ಬೈಲೂರು, ಉಪಾಧ್ಯಕ್ಷ ಪ್ರಕಾಶ್‌ ಹೆಗ್ಡೆ ಎಲಿಯಾಳ, ಕಾರ್ಯದರ್ಶಿ ಹರಿಶ್ಚಂದ್ರ ಶೆಟ್ಟಿ ಕೌಡೂರು, ಜೊತೆ ಕಾರ್ಯದರ್ಶಿ ಪ್ರವೀಶ್‌ ಶೆಟ್ಟಿ ಶೇರಿಗಾರಬೆಟ್ಟು ಕೌಡೂರು, ಅರ್ಚಕರಾದ ವಿಶ್ವನಾಥ ಭಟ್, ಬಿಂದು ಮಾಧವ ಭಟ್ ಮೊದಲಾದವರು ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು.

















































error: Content is protected !!
Scroll to Top