ಕಣಜಾರಿನಲ್ಲಿ ಚಿರತೆ – ಆತಂಕದಲ್ಲಿ ಜನತೆ

ಕಾರ್ಕಳ : ಕಣಜಾರು ಗುಂಡುಪಾದೆಯ ಸಮೀಪ ಫೆ. 9ರಂದು ಸಂಜೆ ಚಿರತೆ ಕಾಣಿಸಿಕೊಂಡಿದ್ದು, ಜನರನ್ನು ಆತಂಕ್ಕೀಡುಮಾಡಿದೆ. ಕಾರಿನಲ್ಲಿ ಸಾಗುತ್ತಿದ್ದವರು ರಸ್ತೆ ಬದಿಯಲ್ಲಿದ್ದ ಚಿರತೆಯ ವಿಡಿಯೋ ಮಾಡಿದ್ದಾರೆ. ದಿನನಿತ್ಯ ಶಾಲಾ ಮಕ್ಕಳು ಸೇರಿದಂತೆ ಅನೇಕ ಮಂದಿ ಈ ದಾರಿಯಲ್ಲಿ ಓಡಾಡುತ್ತಾರೆ. ಇದೀಗ ಈ ಸ್ಥಳದಲ್ಲಿ ಚಿರತೆಯ ಓಡಾಟ ಜನರನ್ನು ಭಯಭೀತರನ್ನಾಗಿಸಿದೆ. ಅಲ್ಲದೆ ಈಗಾಗಲೇ ಈ ಪರಿಸರದ ಅನೇಕ ನಾಯಿಗಳನ್ನು ಬೇಟೆಯಾಡಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.









































































































error: Content is protected !!
Scroll to Top