ಚಿರತೆ ದಾಳಿ – ಅಡಿಕೆ ಮರವೇರಿ ಜೀವ ಉಳಿಸಿಕೊಂಡ ವ್ಯಕ್ತಿ

ಬೆಳ್ತಂಗಡಿ : ಮನೆಯಂಗಳದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ಮಾಡಿದ್ದು, ಈ ವೇಳೆ ಅವರು ಅಡಿಕೆ ಮರವೇರಿ ಜೀವ ಉಳಿಸಿಕೊಂಡ ಘಟನೆ ಕನ್ಯಾಡಿ 1 ಗ್ರಾಮದ ಅಂಡೀರುಮಾರು ಎಂಬಲ್ಲಿ ಜ. 16ರಂದು ನಡೆದಿದೆ.

ಅಂಡೀರುಮಾರು ನಿವಾಸಿ ಮಂಜಪ್ಪ ನಾಯ್ಕ(62) ಅವರು ಬೆಳಗ್ಗೆ 8:15ರ ಸುಮಾರಿಗೆ ಮನೆಯ ಅಂಗಳದಲ್ಲಿದ್ದ ವೇಳೆ ಏಕಾಏಕಿ ನುಗ್ಗಿದ ಚಿರತೆಯೊಂದು ಅವರ ಮೇಲೆ ದಾಳಿ ನಡೆಸಿದೆ. ತಕ್ಷಣ ಹತ್ತಿರದ ಅಡಿಕೆ ಮರವನ್ನೇರಿ ಅವರು ಜೀವ ಉಳಿಸಿಕೊಂಡಿದ್ದಾರೆ.
ಈ ವೇಳೆ ಮಂಜಪ್ಪ ನಾಯ್ಕ ಅವರ ಕಾಲಿಗೆ ಗಂಭೀರ ಗಾಯಗಳಾಗಿವೆ. ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.









































































































error: Content is protected !!
Scroll to Top