ಶಾಸಕರನ್ನು ನೀಚ ಮನಸ್ಥಿತಿಯ ಸುನಿಲ್‌ ಎಂದು ನಿಂದಿಸಿದ ಕಾಂಗ್ರೆಸ್‌ ಮುಖಂಡ

ಉದಯ ಶೆಟ್ಟಿ ಮುನಿಯಾಲು ಪೋಸ್ಟ್‌ಗೆ ಭಾರಿ ವಿರೋಧ

ಕಾರ್ಕಳ : ಶಾಸಕ ವಿ. ಸುನಿಲ್‌ ಕುಮಾರ್‌ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್‌ ಮುಖಂಡ ಉದಯ ಶೆಟ್ಟಿ ಮುನಿಯಾಲು ಅವರು ನೀಚ ಮನಸ್ಥಿತಿಯ ಸುನಿಲ್‌ ಕುಮಾರ್‌ ಎಂದು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಪದ ಬಳಕೆ ಮಾಡಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಪರಶುರಾಮ ಥೀಮ್‌ ಪಾರ್ಕ್‌ನ ಮೇಲ್ಚಾವಣಿಯ ತಾಮ್ರದ ಶೀಟು ಕಳ್ಳತನವಾಗಿರುವ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿಕೊಂಡಿರುವ ಉದಯ ಕುಮಾರ್‌ ಶೆಟ್ಟಿ ಒಬ್ಬ ಸಮಯ ಸಾಧಕ, ಸ್ವಾರ್ಥಿ, ಚುನಾವಣೆಗಾಗಿ ಹಿಂದೂ ಧರ್ಮಕ್ಕೂ, ಜನರಿಗೂ ಮೋಸ ಮಾಡುವ ನೀಚ ಮನಸ್ಥಿತಿಯ ಸುನಿಲ್‌ ಕುಮಾರ್‌ನಂತವರಿಂದಾಗಿ ಇಂದು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೀಯ ಬಿಂದುವಾಗಬೇಕಿದ್ದ ಕಾರ್ಕಳ ವಿವಾದದ ತಾಣವಾಗಿರುವುದು ಅತ್ಯಂತ ಬೇಸರದ ಸಂಗತಿ ಎಂದು ಬರೆದುಕೊಂಡಿದ್ದಾರೆ.

ರಾಜಕೀಯ ಮೇಲಾಟ, ಆರೋಪ, ಪ್ರತ್ಯಾರೋಪ, ಕಿತ್ತಾಟ ಸಾಮಾನ್ಯವಾಗಿ ನಡೆಯುತ್ತಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದ ಪ್ರಜ್ಞಾವಂತ ನಾಗರೀಕರು ಇದೀಗ ಓರ್ವ ಶಾಸಕರಿಗೆ ನೀಚ ಮನಸ್ಥಿತಿಯ ಸುನಿಲ್‌ ಕುಮಾರ್‌ ಎಂದು ಸಭ್ಯತೆ ಮೀರಿದ ಪದಬಳಕೆ ಮಾಡಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಈ ಪದ ಬಳಕೆ ಬಿಜೆಪಿ ಕಾರ್ಯಕರ್ತರಲ್ಲಿ ಕಿಚ್ಚುಹಚ್ಚಿದ್ದು ಕಾರ್ಕಳದ ರಾಜಕೀಯ ಮತ್ತೊಂದು ಮಗ್ಗುಲಿಗೆ ಹೊರಳಲಿರುವುದಂತು ಸತ್ಯ. ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅವರಾಗಲೀ ಅಥವಾ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರಾಗಲೀ ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಇಂತಹ ಪದ ಬಳಕೆ ಮಾಡಿದವರಲ್ಲ ಎನ್ನುವ ಮಾತುಗಳು ರಾಜಕೀಯ ವಲಯದಿಂದ ಕೇಳಿಬರುತ್ತಿದೆ.

ಕರಾವಳಿಯ ನಾಯಕರಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯ, ಪಕ್ಷಭೇದ, ರಾಜಕೀಯ ಟೀಕೆ – ಟಿಪ್ಪಣಿ ಅದೇನೇ ಇದ್ದರೂ ವೈಯಕ್ತಿಕ ನಿಂದನೆ ಮಾಡಿ ರಾಜಕೀಯ ಮುಖಂಡರು ಸಭ್ಯತೆಯ ಎಲ್ಲೆಯನ್ನು ಮೀರಿದ ಉದಾಹರಣೆ ತೀರ ವಿರಳವೆಂದೇ ಹೇಳಬಹುದು.









































































































error: Content is protected !!
Scroll to Top