ಕಾರ್ಕಳ : ಕಾರ್ಕಳ ಭಂಡಾರಿ ಸಮಾಜ ಸಂಘ, ಭಂಡಾರಿ ಮಹಿಳಾ ಸಂಘ, ಭಂಡಾರಿ ಯುವ ವೇದಿಕೆ ಇದರ ಸಂಯುಕ್ತ ಆಶ್ರಯದಲ್ಲಿ ಕಾಬೆಟ್ಟು ವೇಣುಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ, ವೃತ್ತಿ ನಿರತ ಹಿರಿಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಜರುಗಿತು. ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಮಹಾಮಂಡಲದ ಅಧ್ಯಕ್ಷೆ ಅಮಿತಾ ಗಿರೀಶ್ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು.
ಸನ್ಮಾನ – ವಿದ್ಯಾರ್ಥಿ ವೇತನ
ವೃತ್ತಿ ನಿರತ ಹಿರಿಯರಾದ ಶೇಖರ್ ಭಂಡಾರಿ ಕೌಡೂರು, ಮಾಧವ ಭಂಡಾರಿ ಮೂಜೂರು, ವಸುದೇಶ್ ಭಂಡಾರಿ ಪಳ್ಳಿ ಹಾಗೂ ಪ್ರತಿಭಾ ಪುರಸ್ಕಾರದ ಅಂಗವಾಗಿ ಪ್ರಜ್ವಲ್ ಭಂಡಾರಿ ಕೌಡೂರು, ಡಾ. ನಿರೀಕ್ಷಾ ಸದಾನಂದ ಭಂಡಾರಿ ನಲ್ಲೂರು ಮತ್ತು ರಕ್ಷಿತ್ ಭಂಡಾರಿ ಸಿ.ಎ. ಬೆಳ್ಮಣ್ಣು ಅವರನ್ನು ಸನ್ಮಾನಿಸಲಾಯಿತು. ನವೀನ್ ಭಂಡಾರಿ ಬೈಲೂರು, ಸುಮನ ಕೃಷ್ಣ ಭಂಡಾರಿ, ಉಷಾ ಶಶಿಧರ್ ಭಂಡಾರಿ, ವೀಣಾ ರಾಜೇಶ್ ಭಂಡಾರಿ, ಲತಾ ಹರೀಶ್ ಭಂಡಾರಿ ಮತ್ತು ಪ್ರವೀಣ್ ಕೆ. ಭಂಡಾರಿ ಬೆಳ್ಮಣ್ಣು ಸನ್ಮಾನ ಪತ್ರ ವಾಚಿಸಿದರು. ಸಂಘದ ವತಿಯಿಂದ 2024-25ನೇ ಸಾಲಿನಲ್ಲಿ ಎಸ್ಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ. 80ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಈ ಸಂದರ್ಭ ಕಾರ್ಕಳ ಭಂಡಾರಿ ಸಮಾಜ ಸಂಘದ ವತಿಯಿಂದ ನೀಡುತ್ತಿರುವ ವಿದ್ಯಾರ್ಥಿವೇತನಕ್ಕೆ ಕೆ. ವೆಂಕಪ್ಪ ಭಂಡಾರಿ ಮತ್ತು ಶಾಂತಾ ವಿ ಭಂಡಾರಿ ದಂಪತಿ 1 ಲಕ್ಷ ರೂ. ದೇಣಿಗೆ ನೀಡಿದರು.
ನೂತನ ಪದಾಧಿಕಾರಿಗಳ ಆಯ್ಕೆ
2026 -27ರ ಅವಧಿಗೆ ನೂತನ ಅಧ್ಯಕ್ಷರಾಗಿ ಕೃಷ್ಣ ಭಂಡಾರಿ ಜೋಡು ಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಭಂಡಾರಿ ಬೈಲೂರು, ಮತ್ತು ಕೋಶಾಧಿಕಾರಿಯಾಗಿ ರೇಷ್ಮಾ ಸುದರ್ಶನ್ ಭಂಡಾರಿ ಅವರನ್ನು ಆಯ್ಕೆಯಾದರು.

ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಶೇಖರ್ ಎಚ್. ಭಂಡಾರಿಯವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ವಿಶ್ವನಾಥ್ ಭಂಡಾರಿ ನಿಂಜೂರು ಮತ್ತು ಶಶಿಧರ ಕೆ. ಭಂಡಾರಿ, ಉಡುಪಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಗುರುದಾಸ್ ಭಂಡಾರಿ, ಮೂಡಬಿದಿರೆ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಗುರುಪ್ರಸಾದ್ ಎಂ. ಭಂಡಾರಿ, ಭಂಡಾರಿ ಮಹಿಳಾ ಸಂಘದ ಅಧ್ಯಕ್ಷೆ ವೀಣಾ ರಾಜೇಶ್ ಭಂಡಾರಿ, ಭಂಡಾರಿ ಯುವ ವೇದಿಕೆ ಅಧ್ಯಕ್ಷ ಪವನ್ ಭಂಡಾರಿ ಉಪಸ್ಥಿತರಿದ್ದರು. ದಿಯಾ ರಾಜೇಶ್ ಭಂಡಾರಿಯವರ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಭಂಡಾರಿ ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಕೃಷ್ಣ ಭಂಡಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.





























































