ಯುವವಾಹಿನಿ ಕಾರ್ಕಳ ಘಟಕ – 6ನೇ ವರ್ಷದ ಯುವವಾಹಿನಿ ಪೊರ್ಲ ಬಾಲೆ ಕಾರ್ಯಕ್ರಮ

ಕಾರ್ಕಳ : ಯುವವಾಹಿನಿ ಕಾರ್ಕಳ ಘಟಕದ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ 6ನೇ ವರ್ಷದ ಯುವವಾಹಿನಿ ಪೊರ್ಲ ಬಾಲೆ –2025 ಸ್ಪರ್ದೆಯ ಬಹುಮಾನ ವಿತರಣಾ ಕಾರ್ಯಕ್ರಮ ಡಿ. 23ರಂದು ಕಾರ್ಕಳದ ಶ್ರೀ ಕೃಷ್ಣ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಘಟಕದ ಅಧ್ಯಕ್ಷ ಪ್ರಕಾಶ್ ಪೂಜಾರಿ ಕೆರ್ವಾಶೆ ಅಧ್ಯಕ್ಷತೆ ವಹಿಸಿದ್ದರು.

ವಿಜೇತರು
0_3 ವರ್ಷ ಪುಟಾಣಿಗಳ ವಿಭಾಗದಲ್ಲಿ ನಮಿಶ್ ಗಂಜಿಮಠ ಪ್ರಥಮ, ಶಿವಿಷ್ಟ ಸುಹಾನ್ ಪೂಜಾರಿ ಕೊಂಚಾಡಿ ಮಂಗಳೂರು ದ್ವಿತೀಯ, ಝಿಯಾನ ಕ್ಯಾಸ್ಟಲಿನೊ ಮಿಯಾರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಆಯೋಜಕರ ಮೆಚುಗೆ ಗಳಿಸಿದ ಫೋಟೋಸ್ – ಆದ್ಯ ವಿಶಾಲ್ ಸಾಲಿಯಾನ್, ತಸ್ವಿ ಕರ್ಕೇರ ಬೆಳುವಾಯಿ, ಶಿವ್ಯ ಶೆಟ್ಟಿಗಾರ್ ಬೇಲೂರ್
3-5 ಒಳಗಿನ ಮಕ್ಕಳ ವಿಭಾಗದಲ್ಲಿ ಸಾನ್ವಿ ಪತ್ತೊಂಜಿಕಟ್ಟೆ ಪ್ರಥಮ, ಲೆನೋರ ರೋಜ್ ಡಿಸೋಜಾ ದ್ವಿತೀಯ, ರುದ್ವಿ ಪೂಜಾರಿ ಸಾಣೂರು ತೃತೀಯ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಆಯೋಜಕರ ಮೆಚುಗೆ ಗಳಿಸಿದ ಫೋಟೋಸ್ – ಆರುಷಿ, ಅಥರ್ವ ಎಸ್. ಉಪ್ಪಿನಂಗಡಿ,‌ ಕಾರುಣ್ಯಾ ಎಸ್. ಪೂಜಾರಿ.

ಸನ್ಮಾನ
ಕಾರ್ಯಕ್ರಮದಲ್ಲಿ ಭರತನಾಟ್ಯದಲ್ಲಿ ಗಿನ್ನಿಸ್ ದಾಖಲೆ ಸಾಧನೆ ಮಾಡಿದ ವಿದುಷಿ ದೀಕ್ಷಾ, ಶಿವರಾಮ ಕಾರಂತ ಪ್ರಶಸ್ತಿ ವಿಜೇತ ಶಿಕ್ಷಕ ನಾರಾಯಣ ಪೂಜಾರಿ, ಯುವ ಸಾಹಿತಿ ಪ್ರಶಸ್ತಿ ವಿಜೇತ ಚೈತ್ರ ಕಬ್ಬಿನಾಲೆ, ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ಆಯುಷ್ ಆರ್. ಪೂಜಾರಿ, ಯೋಗ ಕ್ಷೇತ್ರದ ಸಾಧಕಿ ಅನ್ವಿ ಹೆಚ್. ಅಂಚನ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಸಹ ಶಿಕ್ಷಕರ ಸಂಘ ಬೆಂಗಳೂರು ಇದರ ಕಾರ್ಕಳ ಶಾಖೆಯ ಅಧ್ಯಕ್ಷ ಆನಂದ ಪೂಜಾರಿ ಮಾಳ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾರ್ಕಳ ವಲಯದ ಅಧ್ಯಕ್ಷ ಪ್ರಮೋದ್ ಚಂದ್ರ ಪೈ, ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ಉಪಸ್ಥಿತರಿದ್ದರು. ಘಟಕದ ನಿಕಟ ಪೂರ್ವ ಅಧ್ಯಕ್ಷೆ ಮಮತಾ ಅಂಚನ್ ಸ್ವಾಗತಿಸಿದರು. ಹಿತಾ, ಸಂತೋಷ್‌, ನಿತಿನ್‌ ಚರಿತ್ರೆ ಕಾರ್ಯಕ್ರಮ ನಿರೂಪಿಸಿದರು. ಘಟಕದ ಕಾರ್ಯದರ್ಶಿ ರಾಕೇಶ್ ಅಮೀನ್ ವಂದಿಸಿದರು.









































































































error: Content is protected !!
Scroll to Top