ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರ ಕದ್ದ ಕಳ್ಳರು

ಶಿವಮೊಗ್ಗ : ಕರ್ತವ್ಯ ನಿರತ ಎಎಸ್ಐ ಮಾಂಗಲ್ಯಸರವನ್ನೇ ಕಳ್ಳರು ಕದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬಿಜೆಪಿ ಕಚೇರಿ ಮುತ್ತಿಗೆ ಪ್ರತಿಭಟನೆಯ ವೇಳೆ ಕರ್ತವ್ಯದಲ್ಲಿದ್ದ ಎಎಸ್ಐ ಅಮೃತಾಬಾಯಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 60 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಎಎಸ್ಐ ಅಮೃತಾಬಾಯಿ ಅವರು ಇತ್ತೀಚೆಗಷ್ಟೇ ಹೊಸ ಮಾಂಗಲ್ಯ ಸರವನ್ನು ಮಾಡಿಸಿದ್ದರು ಎನ್ನಲಾಗಿದೆ. ಪ್ರತಿಭಟನೆಯ ತಳ್ಳಾಟ-ನೂಕಾಟದ ವೇಳೆ ಕಳ್ಳರು ಸರವನ್ನು ಎಗರಿಸಿದ್ದಾರೆ. ಮಾಂಗಲ್ಯ ಸರವನ್ನು ಕಳೆದುಕೊಂಡ ಎಎಸ್ಐ ಅಮೃತಾಬಾಯಿ ಕಣ್ಣೀರಿಟ್ಟಿದ್ದಾರೆ.

ನರೇಗಾ ಹೆಸರು ಬದಲಾವಣೆ, ಇಡಿ ದುರ್ಬಳಕೆಯಾಗುತ್ತಿದೆ ಎಂದು ಬಿಜೆಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ವೇಳೆ ಎಎಸ್‌ಐ ಬಂದೋಬಸ್ತ್‌ನಲ್ಲಿದ್ದರು.







































error: Content is protected !!
Scroll to Top