ಡಿ. 23 : ಸಹಕಾರ ರತ್ನ ಭಾಸ್ಕರ್‌ ಎಸ್‌. ಕೋಟ್ಯಾನ್‌ರಿಗೆ ಹುಟ್ಟೂರ ಅಭಿನಂದನೆ

ಕಾರ್ಕಳ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಕೊಡಮಾಡುವ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಭಾಸ್ಕರ್‌ ಎಸ್.‌ ಕೋಟ್ಯಾನ್‌ ಅವರಿಗೆ ಕೊಳೆಕೆ ಇರ್ವತ್ತೂರು ಅಭಿನಂದನಾ ಸಮಿತಿ ವತಿಯಿಂದ ಡಿ. 23ರಂದು ಸಂಜೆ 5 ಗಂಟೆಗೆ ಇರ್ವತ್ತೂರು ಶಾಲಾ ಮೈದಾನದಲ್ಲಿ ಹುಟ್ಟೂರ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು ಮತ್ತು ಎಸ್‌ಡಿಸಿಸಿ ಬ್ಯಾಂಕ್‌ ಮಂಗಳೂರು ಇದರ ಅಧ್ಯಕ್ಷ ಡಾ. ಎಂ.ಎನ್.‌ ರಾಜೇಂದ್ರ ಕುಮಾರ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ವಿ. ಸುನಿಲ್‌ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ, ಮುಂಬೈ ಉದ್ಯಮಿಗಳಾ‌ದ ಮಹೇಶ್‌ ಶೆಟ್ಟಿ ಕುಡುಪುಲಾಜೆ, ವಿಠಲ್‌ ಅಮೀನ್‌, ಶಾಲಾ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ರಮೇಶ್‌ ಶೆಟ್ಟಿ ಹಾಗೂ ಜಯಕೀರ್ತಿ ಕಡಂಬ ಕೊಳಕೆ ಮನೆ ಇರ್ವತ್ತೂರು ಭಾಗಿಯಾಗಲಿದ್ದಾರೆ.

ಮೆರವಣಿಗೆ – ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ 4.30ಕ್ಕೆ ಗರಡಿಯಿಂದ ಶಾಲಾ ಮೈದಾನದವರೆಗೆ ಮೆರವಣಿಗೆ ನಡೆಯಲಿದ್ದು, ರಾತ್ರಿ 7.30ರಿಂದ ಐಸಿರ ಕಲಾವಿದರು ಮಂಜೇಶ್ವರ ಇವರಿಂದ ತುಳು ಸಾಮಾಜಿಕ ನೀತಿ ಭೋಧಕ ಹಾಸ್ಯ ನಾಟಕ ಜೈ ಭಜರಂಗಬಲಿ ಪ್ರದರ್ಶನಗೊಳ್ಳಲಿದೆ ಎಂದು ಅಭಿನಂದನಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.











































error: Content is protected !!
Scroll to Top