ಬೆಂಗಳೂರು : ಕಮರ್ಷಿಯಲ್ ಎಲ್ಪಿಜಿ ಗ್ಯಾಸ್ ಬೆಲೆಯಲ್ಲಿ ಇಳಿಕೆಯಾಗಿದೆ. 19ಕಿಲೋ ಎಲ್ಪಿಜಿ ಬೆಲೆ 10-10.50 ರೂ ಕಡಿಮೆ ಆಗಿದೆ. 47.5 ಕಿಲೋ ಎಲ್ಪಿಜಿ ಗ್ಯಾಸ್ ಬೆಲೆ 25.50 ರೂ.ನಷ್ಟು ತಗ್ಗಿದೆ. ಉಳಿದ ಗೃಹಬಳಕೆ ಅಡುಗೆ ಅನಿಲದ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ.
ಕಳೆದ ಒಂದು ವರ್ಷದಲ್ಲಿ ಕಮರ್ಷಿಯಲ್ ಗ್ಯಾಸ್ ಬೆಲೆ ಭಾರತದಲ್ಲಿ ಬಹುತೇಕ ನಿರಂತರವಾಗಿ 10 ಬಾರಿ ಇಳಿದಿದೆ. ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಈ ಒಂದು ವರ್ಷ ಯಾವುದೇ ಇಳಿಕೆ ಆಗಿಲ್ಲ. ಕಳೆದ ಒಂದು ವರ್ಷದಲ್ಲಿ ಒಮ್ಮೆ 50 ರೂ. ಬೆಲೆ ಏರಿಕೆಯೂ ಆಗಿದೆ. ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಎಲ್ಪಿಜಿ ಸಿಗುವುದು ಮುಂಬೈನಲ್ಲಿ. ಅತಿ ದುಬಾರಿ ಎನಿಸಿರುವುದು ಚೆನ್ನೈನಲ್ಲಿ. ವಿವಿಧ ರಾಜ್ಯಗಳು ಎಲ್ಪಿಜಿ ಮೇಲೆ ಬೇರೆ ಬೇರೆ ಪ್ರಮಾಣದಲ್ಲಿ ತೆರಿಗೆ ವಿಧಿಸುತ್ತವೆ. ಹೀಗಾಗಿ, ರಾಜ್ಯದಿಂದ ರಾಜ್ಯಕ್ಕೆ ಗ್ಯಾಸ್ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ.









