ಸಂಸ್ಥೆಯನ್ನು ಬಿಂದುವಿನಿಂದ ಸಿಂಧುವಿನೆಡೆಗೆ ಕೊಂಡೊಯ್ದ ಸಾಧಕ : ಎನ್‌. ಎಂ. ಹೆಗ್ಡೆ

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕಡಾರಿ ರವೀಂದ್ರ ಪ್ರಭು ಅವರಿಗೆ ಲಯನ್ಸ್ ಪ್ರಾಂತ್ಯ 4ರ ವತಿಯಿಂದ ಅಭಿನಂದನಾ ಸಮಾರಂಭ

ಕಾರ್ಕಳ : ಕಾರ್ಕಳದ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಭಾಂಗಣದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕಡಾರಿ ರವೀಂದ್ರ ಪ್ರಭು ಅವರನ್ನು ಲಯನ್ಸ್ ಕ್ಲಬ್ ಜಿಲ್ಲೆ 317C, ಪ್ರಾಂತ್ಯ 4ರ ವತಿಯಿಂದ ಅಭಿನಂದನಾ ಸಮಾರಂಭವನ್ನು ನಡೆಸಲಾಯಿತು. ಜಿಲ್ಲೆಯ ಮಾಜಿ ಗವರ್ನರ್ ಎನ್.ಎಂ. ಹೆಗ್ಡೆ ಅಭಿನಂದನಾ ನುಡಿಗಳನ್ನಾಡುತ್ತಾ, 3 ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು, ರಾಜಾಪುರ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯ ಅಧ್ಯಕ್ಷರಾದಾಗ ಕೇವಲ ರೂ.70ಲಕ್ಷ ಬಂಡವಾಳ ನಿರ್ವಹಿಸುತ್ತಿದ್ದ ಸಂಸ್ಥೆಯನ್ನು ಇಂದು ರೂ. 270ಕೋಟಿ ಬಂಡವಾಳಕ್ಕೇರಿಸಿ, ಹಲವಾರು ಪ್ರಶಸ್ತಿಗಳು ಸಂಸ್ಥೆಗೆ ಅರಸಿ ಬರುವಲ್ಲಿ ಪ್ರಯತ್ನಿಸಿರುವ ಕಡಾರಿ ರವೀಂದ್ರ ಪ್ರಭು ಅವರಿಗೆ ಸರಕಾರದ ವತಿಯಿಂದ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ. ಸಂಸ್ಥೆಯನ್ನು ಬಿಂದುವಿನಿಂದ ಸಿಂಧುವಿನಡೆಗೆ ಕೊಂಡೊಯ್ದ ಮಹಾನ್‌ ಸಾಧಕ. ಇವರು ಸಾಮಾಜಿಕವಾಗಿ, ಧಾರ್ಮಿಕವಾಗಿಯೂ ಸಮಾಜದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದು, ಇಂದು ಲಯನ್ಸ್‌ ಜಿಲ್ಲೆ 317c ವತಿಯಿಂದ ಗೌರವಿಸುತ್ತಿರುವುದು ಸಂತಸ ತಂದಿದೆ ಎಂದರು.

ಗೌರವ ಸನ್ಮಾನ
ಅಭಿನಂದನಾ ಗೌರವನ್ನು ಸ್ವೀಕರಿಸಿದ ಕಡಾರಿ ರವೀಂದ್ರ ಪ್ರಭುರವರು ಮಾತನಾಡುತ್ತಾ, ಕಳೆದ ಹಲವು ದಿನಗಳಲ್ಲಿ ಸ್ವೀಕರಿಸಿದ ಹಲವಾರು ಸನ್ಮಾನಗಳಲ್ಲಿ ಈ ದಿನ ಸ್ವೀಕರಿಸಿದ ಈ ಸನ್ಮಾನ ತನ್ನ ಮನದಲ್ಲಿ ಅಚ್ಚಳಿಯದೆ ಉಳಿಯಲಿದೆ. ಯಾಕೆಂದರೆ ಲಯನ್ಸ್‌ ಎಂದರೆ ಪಾಶ್ಚಾತ್ಯ ಶೈಲಿಯನ್ನು ಅಳವಡಿಸಿಕೊಂಡಿರುವ ಸಂಸ್ಥೆ ಎಂದು ತಿಳಿದಿದ್ದೆ, ಆದರೆ ಇದು ಜನರ ಮನದಲ್ಲಿರುವ ತಪ್ಪು ಕಲ್ಪನೆ. ಇಲ್ಲಿಯೂ ಭಾವನೆಗಳಿವೆ. ಅರ್ಹರಿಗೆ ಕ್ಲಪ್ತ ಸಮಯದಲ್ಲಿ ಸ್ಪಂಧಿಸುವ ಮನಸ್ಸಿದೆ. ಎಂದು ಬಹಳ ಭಾವನಾತ್ಮಕವಾಗಿ ನುಡಿದು, ‌ಸನ್ಮಾನ‌ ಮಾಡಿದ ಎಲ್ಲಾ ಲಯನ್ಸ್ ಸದಸ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಪ್ರಾಂತೀಯ ಅಧ್ಯಕ್ಷ ಲಯನ್ ಗುರುಪ್ರಸಾದ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಮಾಜಿ ಪ್ರಾಂತೀಯ ಅಧ್ಯಕ್ಷ ಉದಯಕುಮಾರ್ ಹೆಗ್ಡೆ, ಬ್ಯಾಂಕಿನ ಉಪಾಧ್ಯಕ್ಷ ರವೀಂದ್ರ ನಾಯಕ್, ಶುಭಾಶಂಸನೆಯನ್ನು ಗೈದರು. ವಲಯಾಧ್ಯಕ್ಷ ವಿಶ್ವನಾಥ್ ಪಾಟ್ಕರ್ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಪ್ರಾಂತೀಯ ಕಾರ್ಯದರ್ಶಿ ಸುರೇಶ್ ಶೆಟ್ಟಿ ಸಾಯಿರಾಂ, ರವೀಂದ್ರ ಪ್ರಭು ಅವರ ಪತ್ನಿ ಸುಮತಿ ಪ್ರಭು ಉಪಸ್ಥಿತರಿದ್ದರು.

ಕಾವ್ಯಾ ರಾವ್‌ ಪ್ರಾರ್ಥಿಸಿ, ವಲಯಾಧ್ಯಕ್ಷ ಸತೀಶ್ ಶೆಟ್ಟಿ ವಂದನಾರ್ಪಣೆ ಗೈದರು. ಲಯನ್ಸ್ ಕ್ಲಬ್ ಕಾರ್ಕಳ ಸಿಟಿಯ ಕಾರ್ಯದರ್ಶಿ ನಿಹಾಲ್ ಶೆಟ್ಟಿ ನಿರೂಪಿಸಿದರು. ಪ್ರಾಂತ್ಯ 4ರ ಹನ್ನೆರಡು ಕ್ಲಬ್ಬುಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಲು ಸಹಕರಿಸಿದರು.





























































































error: Content is protected !!
Scroll to Top