ತೆಳ್ಳಾರು ಮಸೀದಿ ಬಳಿಯ ಮನೆಯಲ್ಲಿ ಜಿಂಕೆ ಮಾಂಸ ಪತ್ತೆ – ಓರ್ವ ಪೊಲೀಸ್‌ ವಶಕ್ಕೆ

ಕಾರ್ಕಳ : ದುರ್ಗ ಗ್ರಾಮ ತೆಳ್ಳಾರು ಮಸೀದಿ ಬಳಿಯ ಮನೆಯಲ್ಲಿ ನ. 12ರಂದು ಜಿಂಕೆ ಮಾಂಸ ಪತ್ತೆಯಾಗಿದ್ದು ಪ್ರಕರಣ ಸಂಬಂಧ ಶುಕೂರ್‌ ಎಂಬಾತನನ್ನು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನ ಮನೆಯಲ್ಲಿ ಜಿಂಕೆ ಮಾಂಸ ಮತ್ತು ಚರ್ಮ ಪತ್ತೆಯಾಗಿದೆ. ಶುಕೂರ್‌ ಮತ್ತವರ ಮಕ್ಕಳಾದ ಸಾದತ್‌ ಮತ್ತು ಸಫತ್‌ ವೃತ್ತಿಪರ ದನಕಳ್ಳರಾಗಿದ್ದು, ಸಾದತ್‌ ಹಾಗೂ ಆತನ ತಮ್ಮ ಸಫತ್‌ ಮೇಲೆ ಹಲವಾರು ದನಕಳ್ಳತನ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದಾರೆ.









































































































error: Content is protected !!
Scroll to Top