ಕಾರ್ಕಳ : ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡುವ ವೇಳೆ ಕಾರೊಂದು ಚರಂಡಿಗೆ ಉರುಳಿದ ಘಟನೆ ಅ. 27ರಂದು ಕಾಬೆಟ್ಟುವಿನಲ್ಲಿ ಸಂಭವಿಸಿದೆ. ಕಾರು ಬೈಪಾಸ್ ರಸ್ತೆಯಿಂದ ಕಾಬೆಟ್ಟು ಕಡೆಗೆ ಸಾಗುತ್ತಿದ್ದು, ಎದುರಿನಲ್ಲಿ ಬಂದ ವಾಹನಕ್ಕೆ ಸೈಡ್ ಕೊಡುವಾಗ ಹುಲ್ಲಿನಿಂದ ಆವೃತವಾದ ಚರಂಡಿ ಚಾಲಕನ ಗಮನಕ್ಕೆ ಬಾರದ ಪರಿಣಾಮವಾಗಿ ಕಾರು ಚರಂಡಿಗೆ ಉರುಳಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾರಿಗೂ ಯಾವುದೇ ಅಪಾಯವಾಗಿಲ್ಲ.
ಈ ರಸ್ತೆ ಪುರಸಭಾ ವ್ಯಾಪ್ತಿಗೊಳಪಟ್ಟಿದ್ದು, ಚರಂಡಿಯಲ್ಲಿ ತುಂಬಿರುವ ಹುಲ್ಲು ತೆಗೆಯುವ ಮತ್ತು ಚರಂಡಿಯ ಸ್ವಚ್ಛತೆ ಬಗ್ಗೆ ಆಡಳಿತ ವ್ಯವ್ಯಸ್ಥೆ ಗಮನ ವಹಿಸದೆ ಇರುವುದು ಅಪಘಾತಕ್ಕೆ ಕಾರಣವಾಗಿದೆ.







































