ಕಾರ್ಕಳ ತಾಲೂಕು ಅಕ್ರಮ – ಸಕ್ರಮ ಸಮಿತಿ ಸಭೆ

ಕಾರ್ಕಳ : ಕಾರ್ಕಳ ತಾಲೂಕು ಅಕ್ರಮ ಸಕ್ರಮ ಸಮಿತಿ ಸಭೆಯು ಸೆ. 25ರಂದು ಶಾಸಕ ವಿ. ಸುನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು. ಸಮಿತಿಯ ಮುಂದೆ 35 ಕಡತಗಳನ್ನು ಹಾಜರಪಡಿಸಲಾಗಿತ್ತು. 17 ಹೊಸ ಕಡತಗಳಲ್ಲಿ 16 ಕಡತಗಳನ್ನು ಮಂಜೂರಾತಿ ಮಾಡಲಾಯಿತು, ಓರ್ವ ಗೈರು ಹಾಜರಾಗಿದ್ದರು. ನಕ್ಷೆಯಾಗಿ ಮಂಡಿಸಿರುವ 16 ಕಡತಕ್ಕೆ ಅಂತಿಮ ಮಂಜೂರಾತಿ ಆದೇಶ ನೀಡಲಾಯಿತು. 2 ಕಡತಗಳನ್ನು ಮರು ಸರ್ವೇಗೆ ಹಿಂದಿರುಗಿಸಲಾಯಿತು.

ಸಭೆಯಲ್ಲಿ ತಹಶೀಲ್ದಾರ್ ಪ್ರದೀಪ್ ಆರ್., ಉಪ ತಹಶೀಲ್ದಾರ್ ಮಂಜುನಾಥ ನಾಯಕ್, ಕಂದಾಯ ನಿರೀಕ್ಷಕರಾದ ರಿಯಾಜ್ ಮಹಮ್ಮದ್, ಶಿವಪ್ರಸಾದ್, ವಿಷಯ ನಿರ್ವಹಕರಾದ ತಾರೇಶ್, ಪೂಜಾ ಬಿ., ಸಮಿತಿ ಸದಸ್ಯರಾದ ರಮೇಶ್ ಬಜಕಲ, ಸುನೀತಾ ಶೆಟ್ಟಿ, ಕಾರ್ಕಳ ಮತ್ತು ಅಜೆಕಾರು ಹೋಬಳಿಯ ಸಿಬ್ಬಂದಿ, ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.







































error: Content is protected !!
Scroll to Top